ಮೂಕ ಪ್ರಾಣಿಗಳ ಮೇಲೆ ಮಾನವರ ದೌರ್ಜನ್ಯ ನಡೆಯುತ್ತಲೇ ಇದೆ. ಇಂತಹ ಹಲವಾರು ಕೃತ್ಯಗಳು ಈಗಾಗಲೇ ಬೆಳಕಿಗೆ ಬಂದಿದ್ದು, ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.
ಬದೌನಾದಲ್ಲಿ ನಡೆದಿರುವ ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಮಂಗ ಒಂದಕ್ಕೆ ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದ್ದಾರೆ. ಕರುಣೆ ಇಲ್ಲದ ಈ ಕಟುಕರು ಅದಕ್ಕೆ ಮನಬಂದಂತೆ ಥಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹಿರಿಯ ಪತ್ರಕರ್ತ ಬಲರಾಮ್ ಚೌಹಾಣ್ ಎಂಬವರು ಈ ಕ್ರೂರ ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಪೊಲೀಸ್ ಅಧಿಕಾರಿಗಳ ಗಮನ ಸೆಳೆಯುವ ಮೂಲಕ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ವಿಡಿಯೋ ನೋಡಿದ ಪ್ರಾಣಿ ಪ್ರಿಯರು ಸಹ ಆಘಾತಕ್ಕೊಳಗಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
बदायूं में बंदर को लाठी से पीटकर ले जाते युवकों का वीडियो वायरल, मरणासन्न स्थिति में बंदर को कीचड़ के गड्ढे में फेंका, हुई मौत, फैजगंज बेहटा थाना क्षेत्र के गांव दांवरी का मामला @budaunpolice @igrangebareilly @Uppolice @Abhimanyu1305 @tripathiji1999 @Gaurav_ddk @Gpraksh07 @dgpup pic.twitter.com/sH6e4x37aq
— Balram Singh Chauhan (@Balramsingh_C) July 27, 2023