ಮದುವೆಗೆ ಇನ್ನೊಂದು ದಿನವಿರುವಾಗ ಪ್ರಪೋಸ್ ಮಾಡಿದ್ದರಂತೆ ವಿಕ್ಕಿ ಕೌಶಲ್….!

Vicky Kaushal: Vicky proposed to Katrina just a day before..

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಬಾಲಿವುಡ್ ನ ಸುಂದರ ಜೋಡಿ. ಈ ಜೋಡಿ 2021 ರಲ್ಲಿ ವಿವಾಹವಾಯಿತು. ಬಾಲಿವುಡ್ ನ ಕ್ಯೂಟ್ ಕಪಲ್ ಗಳೆಂದೇ ಖ್ಯಾತಿ ಗಳಿಸಿರುವ ಈ ಜೋಡಿ ಮಧ್ಯೆ ಪ್ರೀತಿ ಚಿಗುರೊಡೆದಿದ್ದು ಯಾವಾಗ ? ಮೊದಲು ಯಾರು ಪ್ರಪೋಸ್ ಮಾಡಿದರು ? ಪ್ರೇಮ ನಿವೇದನೆ ಎಷ್ಟು ವಿಶೇಷವಾಗಿತ್ತು ಎಂಬೆಲ್ಲಾ ಕುತೂಹಲದ ಪ್ರಶ್ನೆಗಳು ಅವರ ಅಪಾರ ಅಭಿಮಾನಿಗಳಲ್ಲಿದೆ.

ಈಗಾಗಲೇ ಈ ಜೋಡಿ ಅನೇಕ ಸಂದರ್ಶನಗಳಲ್ಲಿ ತಮ್ಮ ಪ್ರೇಮಕಥೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಾರದ ಕಾಫಿ ವಿಥ್ ಕರಣ್ ಸಂಚಿಕೆಯಲ್ಲಿ ವಿಕ್ಕಿ, ಕತ್ರಿನಾಗೆ ಪ್ರಪೋಸ್ ಮಾಡಿದ ದಿನದ ಬಗ್ಗೆ ಮಾತನಾಡಿದ್ದಾರೆ. ಮದುವೆಗೆ ಕೇವಲ ಒಂದು ದಿನ ಇರುವಾಗ ವಿಕ್ಕಿ, ಕತ್ರಿನಾಗೆ ಪ್ರಪೋಸ್ ಮಾಡಿದ್ದರಂತೆ . ಈಗಲಾದರೂ ಪ್ರಪೋಸ್ ಮಾಡದಿದ್ದರೆ ಜೀವನ ಪರ್ಯಂತ ಅದರ ಬಗ್ಗೆ ಕೇಳುತ್ತಿರಲೇಬೇಕಾಗುತ್ತದೆ ಎಂದು ಕೊನೆ ಕ್ಷಣದಲ್ಲಿ ಪ್ರಪೋಸ್ ಮಾಡಿದ್ದಾಗಿ ವಿಕ್ಕಿ ಕೌಶಲ್ ಹೇಳಿದ್ದಾರೆ.

“ಅದು ಮದುವೆಯ ಕೊನೆಯ ನಿಮಿಷವಾಗಿತ್ತು. ನೀವು ಪ್ರಪೋಸ್ ಮಾಡದಿದ್ದರೆ, ನಿಮ್ಮ ಜೀವನದುದ್ದಕ್ಕೂ ಈ ಬಗ್ಗೆ ಕೇಳುತ್ತಲೇ ಇರಬೇಕಾಗುತ್ತದೆ ಎಂದು ಎಲ್ಲರೂ ನನ್ನನ್ನು ಎಚ್ಚರಿಸಿದ್ದರು. ಹಾಗಾಗಿ ನಾನು ಮದುವೆಗೆ ಒಂದು ದಿನ ಮುಂಚೆ ಪ್ರಪೋಸ್ ಮಾಡಿದೆ. ಆದರೆ ಅದು ಪ್ರಪೋಸ್ ರೀತಿ ಇರಲಿಲ್ಲ” ಎಂದು ವಿಕ್ಕಿ ಕೌಶಲ್ ಹಂಚಿಕೊಂಡಿದ್ದಾರೆ.

ವಿಕ್ಕಿ ಮತ್ತು ಕತ್ರಿನಾ ರಣಥಂಬೋರ್‌ನಲ್ಲಿರುವ ಹೆರಿಟೇಜ್ ರೆಸಾರ್ಟ್‌ನಲ್ಲಿ 2021 ರ ಡಿಸೆಂಬರ್ 9 ರಂದು ವಿವಾಹವಾದರು. ಮದುವೆಗೂ ಮುಂಚೆ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದುದರಿಂದ ನಮಗೆ ಹೆಚ್ಚಿನ ಸಮಯ ಸಿಗಲಿಲ್ಲ. ಮತ್ತು ಮದುವೆ ನಂತರ ಯಾವು ಒಟ್ಟಿಗೆ ಹೋಗಲು ಸಹ ಕೆಲವು ದಿನಗಳ ಮುಂಚೆಯೇ ಕೂತು ಪ್ಲಾನ್ ಮಾಡಬೇಕು. ಯಾಕೆಂದರೆ ನಮ್ಮದು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗಿನ ಕೆಲಸವಲ್ಲ. ನಮಗೆ ಶನಿವಾರ- ಭಾನುವಾರ ರಜೆ ಇರುವುದಿಲ್ಲ. ಇಬ್ಬರಿಗೂ ಸಿನಿಮಾ ಸಂಬಂಧಿತ ಕೆಲಸಗಳಿರುತ್ತವೆ. ಹಾಗಾಗಿ ಕೆಲವೊಮ್ಮೆ ವಾರಗಟ್ಟಲೆ ಮುಂಚಿತವಾಗಿಯೇ ಪ್ಲಾನ್ ಮಾಡಬೇಕು, ಹಾಗಾಗಿ ಪರಸ್ಪರ ಸಮಯ ಕಳೆಯಬಹುದು ಎಂದು ವಿಕ್ಕಿ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read