ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಹೊಸದಾಗಿ 120 ಉಪ ಪ್ರಾಂಶುಪಾಲರ ಹುದ್ದೆ ಸೃಷ್ಟಿ

ಬೆಂಗಳೂರು: ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಉಪ ಪ್ರಾಂಶುಪಾಲರ ಹುದ್ದೆ ಸೃಷ್ಟಿಸಿದೆ. 216 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗಿದ್ದು, ಶಾಲೆಗಳು ಆರಂಭವಾದ ಎರಡು ಮೂರು ವರ್ಷಗಳ ಬಳಿಕ ಸರ್ಕಾರ ಉಪ ಪ್ರಾಂಶುಪಾಲರ ಹುದ್ದೆಯನ್ನು ಸೃಜಿಸಿ ಆದೇಶ ಹೊರಡಿಸಿದೆ.

276 ಶಾಲೆಗಳಿಗೆ 156 ಉಪ ಪ್ರಾಂಶುಪಾಲರ ಸಮಾನಾಂತರ ಹುದ್ದೆಗಳು ಮಂಜೂರಾಗಿವೆ. ಹೊಸದಾಗಿ 120 ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದ್ದು, ಈ ಹಿಂದೆ ಇದ್ದ 279 ಹುದ್ದೆಗಳನ್ನು ರದ್ದು ಮಾಡಿ ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ.

ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಉಪ ಪ್ರಾಂಶುಪಾಲರ ವೃಂದದ 58 ಹುದ್ದೆಗಳನ್ನು ಸೃಜಿಸಲು, 500ಕ್ಕೂ ಕಡಿಮೆ ದಾಖಲಾತಿ ಹೊಂದಿದ 35 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮುಖ್ಯೋಪಾಧ್ಯಾಯ ಉಪ ಪ್ರಾಂಶುಪಾಲರ ವೃಂದದ ಹುದ್ದೆಗಳನ್ನು ಸ್ಥಳಾಂತರಿಸುವ ಷರತ್ತಿಗೆ ಒಳಪಡಿಸಿ ಸರ್ಕಾರದಿಂದ ಮಂಜೂರಾತಿ ನೀಡಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read