BREAKING: ತೆಲುಗು ಚಿತ್ರರಂಗದ ಹಿರಿಯ ನಟಿ ಚಿತ್ತಾಜಲ್ಲು ಕೃಷ್ಣವೇಣಿ ವಿಧಿವಶ

ತೆಲುಗು ಚಿತ್ರರಂಗದ ಹಿರಿಯ ನಟಿ ಚಿತ್ತಜಲ್ಲು ಕೃಷ್ಣವೇಣಿ ಅವರು ವಯೋಸಹಜ ಕಾಯಿಲೆಗಳಿಂದ ಇಂದು ತಮ್ಮ 100 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಕೃಷ್ಣವೇಣಿ ಅವರು ನಟಿಯಾಗಿ, ಗಾಯಕಿಯಾಗಿ ಮತ್ತು ನಿರ್ಮಾಪಕಿಯಾಗಿ ತೆಲುಗು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಕೃಷ್ಣವೇಣಿ ಅವರು ನಂತರ ನಾಯಕಿಯಾಗಿ ಮಿಂಚಿದರು. ‘ಸತಿ ಅನಸೂಯ’, ‘ದಕ್ಷ ಯಜ್ಞ’, ‘ಭೋಜ-ಕಾಲಿದಾಸ’, ‘ಜೀವನಜ್ಯೋತಿ’, ‘ತುಕಾರಾಂ’, ‘ಕಚ ದೇವಯಾನಿ’ ಮತ್ತು ‘ಮನದೇಶಂ’ ಮುಂತಾದ ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನ ಗೆದ್ದರು. ಅವರು ‘ಜೋ ಅಚ್ಯುತಾನಂದ ಜೋ ಜೋ ಮುಕುಂದ’ ಹಾಡನ್ನು ಹಾಡುವ ಮೂಲಕ ತೆಲುಗು ಬೆಳ್ಳಿ ಪರದೆಯ ಮೇಲೆ ಅನ್ನಮಾಚಾರ್ಯರ ಕೀರ್ತನೆಯನ್ನು ಮೊದಲು ಪ್ರಸ್ತುತಪಡಿಸಿದ ಕೀರ್ತಿ ಪಡೆದರು.

ಕೃಷ್ಣವೇಣಿ ಅವರು ನಿರ್ಮಾಪಕಿಯಾಗಿಯೂ ಯಶಸ್ವಿಯಾದರು. ಅವರು ‘ಮನದೇಶಂ’ (1949) ಚಿತ್ರದ ಮೂಲಕ ನಟ ಎನ್.ಟಿ. ರಾಮರಾವ್ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದರು. ಈ ಚಿತ್ರವು ಸಂಗೀತ ನಿರ್ದೇಶಕ ಘಂಟಸಾಲ ಅವರ ಮೊದಲ ಚಿತ್ರವಾಗಿತ್ತು. ಅವರು ರಮೇಶ್ ನಾಯ್ಡು ಮತ್ತು ಪಿ. ಲೀಲಾ ಅವರಂತಹ ಪ್ರತಿಭೆಗಳನ್ನು ಸಹ ಪರಿಚಯಿಸಿದರು.

ಕೃಷ್ಣವೇಣಿ ಅವರ ನಿಧನವು ತೆಲುಗು ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರ ನಿಧನಕ್ಕೆ ಅನೇಕ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read