ಮುಂಬೈ : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಸೋಮವಾರ ಬೆಳಿಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾದರು.ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ ಡಿಸೆಂಬರ್ 8, 2025 ರಂದು ತಮ್ಮ 90 ನೇ ಹುಟ್ಟುಹಬ್ಬಕ್ಕೆ ಕೆಲವು ದಿನಗಳ ಮೊದಲು ನಿಧನರಾದರು.
ಅವರ ಅಂತ್ಯಕ್ರಿಯೆಯನ್ನು ಪವನ್ ಹ್ಯಾನ್ಸ್ ಸ್ಮಶಾನದಲ್ಲಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ಅಕ್ಟೋಬರ್ 31 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಧರ್ಮೇಂದ್ರ ನವೆಂಬರ್ 10 ರಿಂದ ವೆಂಟಿಲೇಟರ್ನಲ್ಲಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿತ್ತು. ಖಾಸಗಿ ಆಸ್ಪತ್ರೆಯಲ್ಲಿ ವಾರಗಳ ಚಿಕಿತ್ಸೆಯ ನಂತರ, ಧರ್ಮೇಂದ್ರ ಅವರನ್ನು ನವೆಂಬರ್ 12 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಧರ್ಮೇಂದ್ರ ಇಂದು (ನ.24) ರಂದು ನಿಧನರಾದರು.
ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಅಗಸ್ತ್ಯ ನಂದಾ, ಸಲೀಂ ಖಾನ್, ಅಮೀರ್ ಖಾನ್, ಸಂಜಯ್ ದತ್ ಮತ್ತು ರಾಜ್ಕುಮಾರ್ ಸಂತೋಷಿ ಸೇರಿದಂತೆ ಹಲವಾರು ಚಲನಚಿತ್ರ ಗಣ್ಯರು ಪವನ್ ಹನ್ಸ್ ಸ್ಮಶಾನಕ್ಕೆ ಹಿರಿಯ ನಟನ ಅಂತಿಮ ವಿಧಿವಿಧಾನಗಳಿಗಾಗಿ ಆಗಮಿಸಿದ್ದಾರೆ.
#BREAKING Famous actor of his time Dharmendra passes away.
— Nagendra pandey (@nagendr_24) November 24, 2025
Om Shanti Om.😭😭 💐🙏🙏#DharmendraDeol#Dharmendra #Bollywood #Mumbai pic.twitter.com/D8pt3nAIH8
