74ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಗಿರಿಜಾ ಲೋಕೇಶ್ ಇಂದು 74ನೇ ವಸಂತಕ್ಕೆ ಕಾಲಿಟ್ಟಿದ್ದು, ಸಿನಿತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಗಿರಿಜಾ ಲೋಕೇಶ್ 1973ರಲ್ಲಿ ತೆರೆಕಂಡ  ‘ಅಬಚೂರಿನ ಪೋಸ್ಟ್ ಆಫೀಸು’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ಬಳಿಕ ‘ಕಾಕನ ಕೋಟೆ’  ‘ಸಿಂಹಾಸನ’, ‘ನಂಜುಂಡಿ ಕಲ್ಯಾಣ’  ‘ಚಾಲೆಂಜ್ ಗೋಪಾಲಕೃಷ್ಣ’ ‘ರಾಮಾಚಾರಿ’ ‘ಹಳ್ಳಿ ಮೇಷ್ಟ್ರು’ ಸೇರಿದಂತೆ  ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.

ಕಿರುತೆರೆಯಲ್ಲೂ ಸಕ್ರಿಯವಾಗಿರುವ ಗಿರಿಜಾ ಲೋಕೇಶ್ ‘ಸುಬ್ಬಲಕ್ಷ್ಮಿ ಸಂಸಾರ’  ‘ಜೇನುಗೂಡು’ ‘ಪ್ರೀತಿಯ ಅರಸಿ’ ಸೇರಿದಂತೆ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದು,  ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗುತ್ತಿರುವ ‘ನೂರು ಜನ್ಮಕೂ’ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read