BIG NEWS : ‘ಮದ್ಯ’ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ ಸದ್ಯಕ್ಕೆ ‘ಬಿಯರ್’ ಬೆಲೆ ಹೆಚ್ಚಳ ಇಲ್ಲ.!

ಬೆಂಗಳೂರು : ಬೆಲೆ ಏರಿಕೆ ಆತಂಕದಲ್ಲಿದ್ದ ಮದ್ಯ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಸದ್ಯಕ್ಕೆ ಬಿಯರ್ ಬೆಲೆ ಹೆಚ್ಚಳ ಇಲ್ಲ ಎಂಬುದಾಗಿ ತಿಳಿದು ಬಂದಿದೆ.

ಬಿಯರ್ ದರ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ, ಕರ್ನಾಟಕದಲ್ಲಿ ಬಿಯರ್ ಬೆಲೆ ಶೀಘ್ರದಲ್ಲೇ ಪ್ರತಿ ಬಾಟಲಿಗೆ ಸುಮಾರು 10-20 ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಸದ್ಯಕ್ಕೆ ದರ ಪರಿಷ್ಕರಣೆ ನಿರ್ಧಾರವನ್ನು ಸರ್ಕಾರ ಮುಂದೂಡಿದೆ.

ಬಿಯರ್ ದರ ಹೆಚ್ಚಿಸಿದ್ರೆ ಆದಾಯಕ್ಕೆ ಪೆಟ್ಟು ಬೀಳಬಹುದು ಎಂಬ ಕಾರಣಕ್ಕೆ ಬಿಯರ್ ದರ ಏರಿಸದೇ ಇರಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಮೂಲಗಳ ಪ್ರಕಾರ ಜನವರಿವರೆಗೆ ಬಿಯರ್ ದರ ಹೆಚ್ಚಳ ಮಾಡದೇ ಇರಲು ಅಬಕಾರಿ ಇಲಾಖೆ ನಿರ್ಧರಿಸಿದೆ.ಇಯರ್ ಎಂಡ್ ಪಾರ್ಟಿ, ಕ್ರಿಸ್ ಮಸ್ ಹಬ್ಬದ ಹಿನ್ನೆಲೆ ಈ ಸಲ ಬಿಯರ್ ಗೆ ಭಾರಿ ಬೇಡಿಕೆ ಬರುವ ಸಾಧ್ಯತೆಯಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read