ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಂಬನ್-ರಾಮೇಶ್ವರಂ ನಡುವೆ ಸಂಪರ್ಕ ಕರ್ಲಿಸುವ ವರ್ಟಿಕಲ್ ಲಿಫ್ಟ್ ರೈಲು ಸೇತುವೆಯನ್ನು ಉದ್ಘಾಟಿಸಿದ್ದಾರೆ.
ದೇಶದ ಮೊದಲ ವರ್ಟಿಕಲ್ ಲಿಫ್ಟ್ ರೈಲು ಸೇತುವೆ ಎಂಬ ಖ್ಯಾತಿಯನ್ನು ಈ ಸೇತುವೆ ಪದೆದುಕೊಂಡಿದೆ. ಅತ್ಯಾಧುನಿಕ ಎಂಜಿನಿಯರ್ಂಗ್ ತಂತ್ರಜ್ಞಾನಕ್ಕೆ ಈ ಬ್ರಿಡ್ಜ್ ಸಾಕ್ಷಿಯಾಗಿದೆ. ಸಮುದ್ರ ಮಾರ್ಗದಲ್ಲಿ ಹಡಗು ಸಂಚಾರದ ವೇಳೆ ಸೇತುವೆ ಮೇಲಕ್ಕೆತ್ತಲ್ಪಡುತ್ತದೆ. 5 ನಿಮಿಷದಲ್ಲಿ ಗರಿಷ್ಠ 22 ಮೀಟರ್ ವರೆಗೆ ಮೇಲಕ್ಕೆತ್ತಲ್ಪಡುತ್ತದೆ. ಬಳಿಕ ಮತ್ತೆ ಸ್ವಸ್ಥಾನಕ್ಕೆ ಮರಳುತ್ತದೆ. ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ ಮೂಲಕ ಸೇತುವೆ ಕಾರ್ಯನಿರ್ವಹಿಸುತ್ತದೆ. ಬರೋಬ್ಬರಿ 550 ಕೋಟಿ ವೆಚ್ಚದಲ್ಲಿ ಆರ್ ವಿ ಎನ್ ಎಲ್-ರೈಲ್ ವಿಕಾಸ ನಿಗಮ ನಿಯಮಿತ ಸಂಸ್ಥೆ ವರ್ಟಿಕಲ್ ಲಿಫ್ಟ್ ಸೇತುವೆ ನಿರ್ಮಾಣ ಮಾಡಿದೆ.
ಈ ಸೇತುವೆ ಮೇಲೆ ಗಂಟೆಗೆ 75 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದೆ. ಈ ಸೇತುವೆ ಮೂಲಕ 5 ನಿಮಿಷದಲ್ಲಿ ರಾಮೇಶ್ವರಂ ತಲುಪಬಹುದು. 2.5 ಕಿ.ಮೀ ಉದ್ದದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ರೈಲು ಸೇತುವೆ ಇದಾಗಿದೆ. ಆರ್ಥಿಕ, ಪ್ರವಾಸೋದ್ಯಮ ಮತ್ತು ಯಾತ್ರಿಕರಿಗೆ ಈ ಸೇತುವೆ ಅನುಕೂಲವಾಗಲಿದೆ.