ಹಳೆ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್: ದಾಖಲೆ ಪತ್ರ ಇಲ್ಲದಿದ್ದರೂ ತೆರಿಗೆ ವಿನಾಯಿತಿ

ಬೆಂಗಳೂರು: ಹಳೆ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ರಸ್ತೆ ತೆರಿಗೆ ವಿನಾಯಿತಿ ನೀಡುವ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸಲು ರಾಜ್ಯ ರಸ್ತೆ ಪ್ರಾಧಿಕಾರ ನಿರ್ಧರಿಸಿದೆ.

ವಾಹನ ಮಾಲೀಕರಿಗೆ ವಾಹನದ ಮೌಲ್ಯದ ಆಧಾರದಲ್ಲಿ ನೇರವಾಗಿ ತೆರಿಗೆ ವಿನಾಯಿತಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ದಾಖಲೆ ಪತ್ರಗಳು ಇಲ್ಲದ ಕಾರಣಕ್ಕೆ ತೆರಿಗೆ ವಿನಾಯಿತಿ ಸೌಲಭ್ಯದಿಂದ ವಾಹನ ಮಾಲೀಕರು ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರ ಹಳೆಯ ವಾಹನಗಳ ತೆರಿಗೆ ಪಾವತಿ ದಾಖಲೆ ಪತ್ರ ಲಭ್ಯವಿಲ್ಲದಿದ್ದರೂ ಹೊಸ ವಾಹನಗಳ ಖರೀದಿ ಮೌಲ್ಯದ ಆಧಾರದಲ್ಲಿ ವಾಹನ ಮಾಲೀಕರಿಗೆ ನೇರವಾಗಿ ರಸ್ತೆ ತೆರಿಗೆ ವಿನಾಯಿತಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಹೊಸ ದ್ವಿಚಕ್ರ ವಾಹನ ಖರೀದಿ ಮೇಲೆ ಒಂದು ಸಾವಿರದಿಂದ 5000 ರೂ.ವರೆಗೆ, ನಾಲ್ಕು ಚಕ್ರದ ವಾಹನಗಳ ಖರೀದಿ ಮೇಲೆ 10,000 ದಿಂದ 40,000 ರೂ.ವರೆಗೆ ತೆರಿಗೆ ವಿನಾಯಿತಿ ನೀಡಲು ಕೋರಲಾಗಿದ್ದು, ಈ ಪ್ರಸ್ತಾವನೆಗೆ ಸರ್ಕಾರ ಸಮ್ಮತಿ ಸೂಚಿಸಿದೆ.

ಹಳೆ ವಾಹನಗಳನ್ನು ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳಲ್ಲಿ ಗುಜರಿಗೆ ಹಾಕಿದ ನಂತರ ಮಾಲೀಕರು ಶೋರೂಮ್ ಗಳಿಗೆ ಸಿಓಡಿ ಸಲ್ಲಿಸಿ ಹೊಸ ವಾಹನ ಖರೀದಿಸಿದಾಗ ವಾಹನ ಮೌಲ್ಯದ ಮೇಲೆ ನೇರವಾಗಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ. ಹಳೆಯ ವಾಹನಗಳ ತೆರಿಗೆ ಪಾವತಿ ದಾಖಲೆ ಪತ್ರಗಳು ಅನೇಕ ಮಾಲೀಕರ ಬಳಿ ಇಲ್ಲ. ಇಲಾಖೆಯಲ್ಲಿಯೂ ಇರುವುದಿಲ್ಲ. ಇಂತಹ ವಾಹನಗಳನ್ನು ಗುಜರಿಗೆ ಹಾಕುವವರಿಗೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದ್ದು, ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read