ʼಧನʼ ಲಾಭಕ್ಕೆ ಕಾರಣವಾಗುತ್ತೆ ಕಚೇರಿಯಲ್ಲಿರೋ ಟೇಬಲ್

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಸುತ್ತಲಿರುವ ವಸ್ತುಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಕೆಲ ವಸ್ತುಗಳು ಸಕಾರಾತ್ಮಕ ಪ್ರಭಾವ ಬೀರಿದ್ರೆ ಮತ್ತೆ ಕೆಲವು ನಕಾರಾತ್ಮಕ ಪ್ರಭಾವ ಬೀರುತ್ತವೆ. ಕಚೇರಿಯಲ್ಲಿ ನಿರಂತರವಾಗಿ ಆಗುವ ನಷ್ಟ, ಹಾನಿ ಅಥವಾ ಮತ್ತೇನೋ ಕೆಟ್ಟ ಘಟನೆಗಳಿಗೆ ವಾಸ್ತುವಿನ ಪ್ರಮುಖ ಪಾತ್ರವಿರುತ್ತದೆ. ನೀವು ಕಚೇರಿಯಲ್ಲಿ ಟೇಬಲ್‌ ಎಲ್ಲಿಡಬೇಕು, ಯಾವ ದಿಕ್ಕಿನಲ್ಲಿರಬೇಕು ಹಾಗೆ ಟೇಬಲ್‌ ಮೇಲೆ ಏನೆಲ್ಲ ಇರಬೇಕು ಎಂಬುದನ್ನು ತಿಳಿದಿದ್ದರೆ ಒಳ್ಳೆಯದು.

ಕಚೇರಿಯಲ್ಲಿ ನಿಮ್ಮ ಮೇಜಿನ ಹಿಂದಿರುವ ಖುರ್ಚಿ ಗೋಡೆ ಬದಿಗಿರಬೇಕು. ಅಂದ್ರೆ ನಿಮ್ಮ ಬೆನ್ನು ಗೋಡೆ ಕಡೆ ಇರಬೇಕು. ಮುಖ್ಯದ್ವಾರ, ಕಿಟಕಿ ಅಥವಾ ಈಶಾನ್ಯ ದಿಕ್ಕಿಗೆ ಬೆನ್ನು ಇರುವಂತೆ ಕುಳಿತುಕೊಳ್ಳಬೇಡಿ. ನಿಮ್ಮ ಕಚೇರಿಗೆ ಯಾರೇ ಬಂದ್ರು ನಿಮ್ಮ ಮುಖ ಕಾಣಬೇಕೆ ವಿನಃ ಬೆನ್ನಲ್ಲ.

ಕಾಗದದ ಮೇಲೆ ಇಡುವ ಸ್ಫಟಿಕವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇಡಿ. ನೀರಿನ ಬಾಟಲಿಯನ್ನು ಉತ್ತರ ದಿಕ್ಕಿಗೆ ಇಡಿ, ಪೇಪರ್ ಫೈಲ್‌ಗಳನ್ನು ಬಲಭಾಗದಲ್ಲಿ ಇಡಿ. ಹಾಗೆಯೇ ಸಾಧ್ಯವಾದ್ರೆ ನಿಮ್ಮ ಮೇಜಿನ ಮೇಲೆ ಗ್ಲೋಬ್, ಟೇಬಲ್ ಗಡಿಯಾರ, ನೋಟ್‌ಪ್ಯಾಡ್-ಪೆನ್ ಮತ್ತು ಪಿರಮಿಡ್ ಇಡಿ. ಇದು ನಿಮ್ಮ ಕಚೇರಿಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಿಮ್ಮ ಕಚೇರಿ ಟೇಬಲ್‌ ಮೇಲೆ ಕೆಲ ವಸ್ತುಗಳು ನಕಾರಾತ್ಮಕ ಶಕ್ತಿ ಹೆಚ್ಚಿಸುವ ಕಾರಣ ಅದನ್ನು ನೀವು ಇಡಬಾರದು. ಕಪ್ಪು ಮತ್ತು ಕೆಂಪು ಬಣ್ಣದ ವಸ್ತು, ಗಾಜಿನ ವಸ್ತು ಹಾಗೂ ಕನ್ನಡಿಯನ್ನು ಇಡಬೇಡಿ. ಹಾಗೆಯೇ ಕಚೇರಿಯಲ್ಲಿ ಕೆಲಸ ಮಾಡುವ ಮೇಜಿನ ಮೇಲೆಯೇ ಆಹಾರ ಸೇವನೆ, ಊಟ ಮಾಡುವ ಕೆಲಸ ಮಾಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read