ರಾಜ್ಯದ 9ನೇ ‘ವಂದೇ ಭಾರತ್’ ರೈಲಿಗೆ ಇಂದು ಮೋದಿ ಚಾಲನೆ: ಹುಬ್ಬಳ್ಳಿ- ಪುಣೆ ಟಿಕೆಟ್ ದರ 1530 ರೂ.

ಹುಬ್ಬಳ್ಳಿ: ಪುಣೆ -ಹುಬ್ಬಳ್ಳಿ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಸಂಚಾರಕ್ಕೆ ಸೆ. 16ರಂದು ಅಹಮದಾಬಾದ್ ನಿಂದ ವರ್ಚುಯಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ.

ಇದು ರಾಜ್ಯದಲ್ಲಿ ಸಂಚರಿಸುವ 9 ವಂದೇ ಭಾರತ್ ರೈಲು ಆಗಿರಲಿದೆ. ವಾರಕ್ಕೆ ಮೂರು ದಿನ ಹುಬ್ಬಳ್ಳಿಯಿಂದ ಪುಣೆಗೆ ಸಂಚರಿಸಲಿದೆ. ಬೆಳಗಾವಿ ಮಾರ್ಗವಾಗಿ ಸೆ. 18 ರಿಂದ ವಾರಕ್ಕೆ ಮೂರು ದಿನ ಪ್ರತಿ ಬುಧವಾರ, ಶುಕ್ರವಾರ, ಭಾನುವಾರ ಸಂಚರಿಸುತ್ತದೆ.

ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು 5 15ಕ್ಕೆ ಧಾರವಾಡ, 6.65ಕ್ಕೆ ಬೆಳಗಾವಿ, 9:15ಕ್ಕೆ ಮೀರಜ್, 9.30ಕ್ಕೆ ಸಾಂಗ್ಲಿ, 10:35 ಕ್ಕೆ ಸತಾರಾ ಹಾಗೂ 1.30ಕ್ಕೆ ಪುಣೆ ತಲುಪಲಿದೆ.

ಹುಬ್ಬಳ್ಳಿಯಿಂದ ಪುಣೆಗೆ ಕ್ಯಾಟರಿಂಗ್ ಶುಲ್ಕ ಸೇರಿ ಚೇರ್ ಕಾರ್ ಪ್ರಯಾಣಕ್ಕೆ 1,530 ರೂ., ಎಕ್ಸಿಕ್ಯೂಟಿವ್ ಕ್ಲಾಸ್ ಗೆ 2780 ರೂ., ಕ್ಯಾಟರಿಂಗ್ ಇಲ್ಲದೆ ಚೇರ್ ಕಾರ್ ಗೆ 1185 ರೂ., ಎಕ್ಸಿಕ್ಯೂಟಿವ್ ಕ್ಲಾಸ್ ಗೆ 2325 ರೂ. ದರ ನಿಗದಿಪಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read