ಪ್ರಯಾಣಿಕರಿಗೆ ಸಿಹಿ ಸುದ್ದಿ: ಹೊಸ ಅನುಭವ ನೀಡುವ ಭಾರತದ ಮೊದಲ ‘ವಂದೇ ಭಾರತ್ ಸ್ಲೀಪರ್ ಕೋಚ್’ ಡಿಸೆಂಬರ್‌ನಿಂದ ಶುರು | India’s first Vande Bharat sleeper train

ನವದೆಹಲಿ: ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾದ ವಂದೇ ಭಾರತ್ ಎಕ್ಸ್ ಪ್ರೆಸ್ ನ ಸ್ಲೀಪರ್ ಕೋಚ್ 2024ರ ಡಿಸೆಂಬರ್ ಅಂತ್ಯದ ವೇಳೆಗೆ ಸಂಚಾರ ಆರಂಭಿಸಲಿದೆ.

ಬೆಂಗಳೂರಿನ ಅರ್ಥ್ ಮೂವರ್ಸ್ ಲಿಮಿಟೆಡ್ ಮತ್ತು ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗಳಲ್ಲಿ ವಂದೇ ಭಾರತ್ ರೈಲಿನ ಸ್ಲೀಪರ್ ಕೋಚ್ ಗಳನ್ನು ತಯಾರಿಸಲಾಗಿದೆ. ಸೆಪ್ಟೆಂಬರ್ 20ರಂದು ಮೊದಲ ಸೆಟ್ ಕೋಚ್ ಗಳನ್ನು ರವಾನಿಸಲಾಗುವುದು.

ವಂದೇ ಭಾರತ್ ಎಕ್ಸ್ ಪ್ರೆಸ್ ನ ಸ್ಲೀಪರ್ ಕೋಚ್ ರೈಲು ಡಿಸೆಂಬರ್ ಅಂತ್ಯದ ವೇಳೆಗೆ ಹಳಿಗೆ ಇಳಿಯಲಿದೆ ಎಂದು ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ತಿಳಿಸಿದ್ದಾರೆ.

ಸ್ವದೇಶಿ ತಂತ್ರಜ್ಞಾನ ಬಳಕೆ ಮಾಡಿಕೊಂಡು ಪರಿಸರ ಸ್ನೇಹಿಯಾಗಿ ಈ ಸ್ಲೀಪರ್ ಕೋಚ್ ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ದೂರದ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತವೆ. ವಿಶಾಲ ಸ್ಥಳಾವಕಾಶ, ಆರಾಮದಾಯಕ ಸೀಟುಗಳು, ಸುಸಜ್ಜಿತ ವಿಶಾಲ ಶೌಚಾಲಯಗಳು, ಉತ್ತಮ ಬೆಳಕಿನ ವ್ಯವಸ್ಥೆಯನ್ನು ವಂದೇ ಭಾರತ್ ಸ್ಲೀಪರ್ ಕೋಚ್ ಗಳು ಹೊಂದಿವೆ.

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೆಪ್ಟೆಂಬರ್ 20 ರೊಳಗೆ ಬೆಂಗಳೂರಿನ BEML ಸ್ಥಾವರದಿಂದ ರವಾನೆಯಾಗಲಿದೆ ಮತ್ತು ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಪಿ.ಸಿ. ಮೋಹನ್ ತಿಳಿಸಿದ್ದಾರೆ.

https://twitter.com/PCMohanMP/status/1828311446138257474

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read