ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ವ್ಯಾನ್: 12 ಜನರು ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಆಳವಾದ ಬಾವಿಗೆ ಬಿದ್ದ ಪರುಣಾಮ 12 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಕಚರಿಯಾ ಗ್ರಾಮದಲ್ಲಿ ನಡೆದಿದೆ.

ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಬಾವಿಗೆ ಬಿದ್ದವರನ್ನು ರಕ್ಷಿಸಲೆಂದು ಬಾವಿಗೆ ಹಾರಿದ ಯುವಕನೂ ಸೇರಿದ್ದಾನೆ.

ಉನ್ಹೆಲ್ ಹಾಗೂ ರತ್ಲಂ ಜಿಲ್ಲೆಯ ಜನರು ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದರು. ಖೋಜಂಖೇಡಾ ಗ್ರಾಮದಿಂದ ನಿಮುಚ್ ಜಿಲ್ಲೆಯ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ರಸ್ತೆಯಲ್ಲಿ ಬೈಕ್ ಹಾಗೂ ವ್ಯಾನ್ ಗಳ ನಡುವೆ ಅಪಘಾತ ಸಂಭವಿಸಿದೆ. ಇದೇ ವೇಳೆ ವ್ಯಾನ್ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು, ವೇಗವಾಗಿ ಬಂದು ಬಾವಿಗೆ ಬಿದ್ದಿದೆ.

ಬಾವಿಗೆ ಬಿದ್ದ ಜನರನ್ನು ರಕ್ಷಿಸಲೆಂದು ಓರ್ವ ಯುವಕ ವಾಬಿಗೆ ಇಳಿದಿದ್ದಾನೆ. ಆದರೆ ಆತನು ಕೂಡ ಸಾವನ್ನಪ್ಪಿದ್ದಾನೆ. ದುರಂತದಲ್ಲಿ ಒಟ್ಟು 12 ಜನರು ಮೃತಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read