ಆಗ್ರಾ: ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ರಾತ್ರಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಕಾರನ್ನು ತರಲಾಗಿದ್ದು, ಇದೀಗ ಕಾರಿನ ಮಾಲೀಕರ ಮೇಲೆ ಕೇಸು ದಾಖಲು ಮಾಡಲಾಗಿದೆ. ವಾಹನಗಳ ಪ್ರವೇಶವನ್ನು ನಿಷೇಧಿಸುವ ಜಾಗದಲ್ಲಿ ರೈಲ್ವೆ ಫ್ಲ್ಯಾಟ್‌ಫಾರ್ಮ್ ಬಳಿ ಸುನಿಲ್ ಕುಮಾರ್ ಎಂಬುವವರು ಎಂಜಿ ಹೆಕ್ಟರ್ ಎಸ್‌ಯುವಿ ಕಾರನ್ನು ತಂದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಘಟನೆಯನ್ನು ಪೊಲೀಸರು ಗಮನಿಸಿದ್ದಾರೆ. ವರದಿಯ ಪ್ರಕಾರ, ಭದ್ರತಾ ಲೋಪದಿಂದಾಗಿ ಕಾರು ಒಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ವಿಡಿಯೋದಲ್ಲಿ, ನಿಲ್ಲಿಸಿದ ರೈಲಿನ ಪಕ್ಕದಲ್ಲಿ ಕಾರು ಚಾಲನೆ ಮಾಡುತ್ತಿರುವುದನ್ನು ನಾವು ನೋಡಬಹುದು.
ಭದ್ರತಾ ಲೋಪದಿಂದ ಮಾರ್ಚ್ 8 ರಂದು ರಾತ್ರಿ 11:30 ಕ್ಕೆ ಈ ಘಟನೆ ನಡೆದಿದೆ. ನಾವು ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಆಗ್ರಾ ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಪ್ರಶಸ್ತಿ ಶ್ರೀವಾಸ್ತವ ತಿಳಿಸಿದ್ದಾರೆ.
ರೈಲ್ವೆ ಕಾಯಿದೆಯ ಸೆಕ್ಷನ್ 159 (ರೈಲ್ವೆ ಸೇವಕರ ನಿರ್ದೇಶನಗಳಿಗೆ ವಾಹನಗಳ ಚಾಲಕರು ಅಥವಾ ಕಂಡಕ್ಟರ್‌ಗಳ ಅಸಹಕಾರ, ಇತ್ಯಾದಿ) ಮತ್ತು 147 (ಅತಿಕ್ರಮಣ ಮತ್ತು ಅತಿಕ್ರಮಣದಿಂದ ದೂರವಿರಲು ನಿರಾಕರಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
https://twitter.com/sirajnoorani/status/1636619786787639296?ref_src=twsrc%5Etfw%7Ctwcamp%5Etweetembed%7Ctwterm%5E1636619786787639296%7Ctwgr%5E09afcf93555345463b70c9ad16927d1e24798745%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-man-drives-suv-on-agra-cantonment-railway-platform-to-create-reel-fir-registered-after-stunt-video-goes-viral