ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲೆ ಮುಗಿದ ಮೇಲೆ ಶಿಕ್ಷಕರು ಮತ್ತು ಕಾರ್ಮಿಕರು ಶಾಲೆಗೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ. ಆದ್ರೆ ಮಗುವೊಂದು ಶಾಲಾ ಕೊಠಡಿಯಲ್ಲೇ ಸಿಕ್ಕಿಬಿದ್ದಿದ್ದ ಘಟನೆ ಬೆಳಕಿಗೆ ಬಂದಿದೆ.
ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮೆಜಾ ಬ್ಲಾಕ್‌ನ ಲೋಹರಾ ಗ್ರಾಮದಲ್ಲಿ ನಡೆದಿದೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಗು ಶಾಲೆಯಲ್ಲಿ ಬಂಧಿಯಾಗಿತ್ತು. ಮಗುವಿನ ಅಳುವಿನ ಶಬ್ಧ ಕೇಳಿದ ಸ್ಥಳೀಯರು ತಕ್ಷಣ ಸಹಾಯಕ್ಕೆ ಮುಂದಾಗಿದ್ದಾರೆ. ಹೆಲ್ಪ್ ಲೈನ್ ಗೆ ಕರೆ ಮಾಡಿ, ಮಗುವನ್ನು ರಕ್ಷಿಸಿದ್ದಾರೆ. ಇದಕ್ಕೆ ಶಾಲೆಯ ಕಾರ್ಯ ನಿರ್ವಾಹಕ ಪ್ರಾಂಶುಪಾಲರ ನಿರ್ಲಕ್ಷ್ಯ ಕಾರಣ ಎಂದು ಅವರನ್ನು ಅಮಾನತುಗೊಳಿಸಲಾಗಿದೆ.
ಬಾಲಕ ಶಾಲೆಯೊಳಗೆ ಬಂಧಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿಯಾ ಸಿಂಗ್ ಎನ್ನುವವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಗುವಿನ ವಿಡಿಯೋ ಹಂಚಿಕೊಂಡಿದ್ದು, ಶಾಲೆ ಸಿಬ್ಬಂದಿ, ಮನೆಗೆ ಹೋಗುವ ಅರ್ಜೆಂಟ್ ನಲ್ಲಿ ಮಗುವನ್ನು ಮರೆತಿದ್ದಾರೆಂದು ಶೀರ್ಷಿಕೆ ಹಾಕಿದ್ದಾರೆ.
https://twitter.com/priyarajputlive/status/1812868996443615728?ref_src=twsrc%5Etfw%7Ctwcamp%5Etweetembed%7Ctwterm%5E1812868996443615728%7Ctwgr%5E02b67d473a4c0e9faea4bf20d61dc365d5fbab25%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Futtarpradeshchildaccidentallygetslockedinsideschoolafterstaffclosesschoolandgoeshomeinprayagrajrescuedbylocalswatchvideo-newsid-n622256652