BREAKING : ಉತ್ತರಕಾಶಿ ಸುರಂಗ ಕಾರ್ಯಾಚರಣೆ : ‘ವಿಕ್ಟರಿ’ ಸಿಂಬಲ್ ತೋರಿಸಿದ ಸಿಬ್ಬಂದಿ, ಕೆಲವೇ ಕ್ಷಣದಲ್ಲಿ 41 ಕಾರ್ಮಿಕರು ಹೊರಕ್ಕೆ

ಉತ್ತರಖಾಂಡ್ ನ ಉತ್ತರಕಾಶಿಯಲ್ಲಿ ಸಿಲ್ಕ್ಯಾರಾ ಸುರಂಗದೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣಾಕಾರ್ಯಾಚರಣೆ ಬಹುತೇಕ ಯಶಸ್ವಿಯಾದಂತೆ ಆಗಿದ್ದು, ಕೆಲವೇ ಕ್ಷಣದಲ್ಲಿ 41 ಕಾರ್ಮಿಕರು ಹೊರಗೆ ಬರಲಿದ್ದಾರೆ.

41 ಕಾರ್ಮಿಕರು ಸಿಲುಕಿರುವ ಸ್ಥಳಕ್ಕೆ ಸಿಬ್ಬಂದಿಗಳು ತಲುಪಿದ್ದು, ವಿಕ್ಟರಿ ಸಿಂಬಲ್ ತೋರಿಸಿದ್ದಾರೆ. ಕೆಲವೇ ಕ್ಷಣದಲ್ಲಿ  ಕಾರ್ಮಿಕರು ಹೊರಕ್ಕೆ ಬರುವ ಸಾಧ್ಯತೆಯಿದೆ.

ದೇವರ ದಯೆ, ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆಯಿಂದ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಿದ್ದಾರೆ. ಉತ್ತರಾಖಂಡದಲ್ಲಿ ಕುಸಿದ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಅಂತಿಮ ಹಂತದ ಕಾರ್ಯಾಚರಣೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 40 ಆಂಬುಲೆನ್ಸ್, ವೈದ್ಯ ಸಿಬ್ಬಂದಿ ಗಳನ್ನು ನಿಯೋಜಿಸಲಾಗಿದೆ.

ಉತ್ತರಾಖಂಡದ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಕುಸಿದ ಭಾಗದ ಕೊನೆಯ 10 ಅಥವಾ 12 ಮೀಟರ್ ಉದ್ದದ ಅವಶೇಷಗಳ ಮೂಲಕ ಅಡ್ಡವಾಗಿ ಕೊರೆಯುವಿಕೆ ಕಾರ್ಯಾಚರಣೆಯಲ್ಲಿ ಹನ್ನೆರಡು ರಂಧ್ರ ಗಣಿಗಾರಿಕೆ ತಜ್ಞರು ಭಾಗಿಯಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read