16 ವರ್ಷದ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ ಗ್ಯಾಂಗ್ ರೇಪ್ ನಾಡೆಸಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರ ಸಿವಿಲ್ ಲೈನ್ ನಲ್ಲಿ ನಡೆದಿದೆ.
ಮೀರತ್ ರಸ್ತೆಯ ಕಂಪನಿ ಬಾಗ್ ಬಳಿ ಅಪ್ರಾಪ್ತೆಯನ್ನು ಅಪಹರಿಸಿದ್ದ ಇಬ್ಬರು ಯುವಕರು ಕಾರಿನಲ್ಲಿ ಹೋಟೆಲ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಕೃತ್ಯದ ವಿಡಿಯೋ ಮಾಡಿಟ್ಟುಕೊಂಡು, ವಿಷಯ ಬಾಯ್ಬಿಟ್ಟರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬೆದರಿಕೆಯೊಡ್ಡಿದ್ದಾರೆ. ಮನೆಗೆ ಬಂದ ಬಾಲಕಿ ತೀವ್ರ ಅಸ್ವಸ್ಥಳಾಗಿ ಅನಾರೋಗ್ಯಕ್ಕೀಡಾಗಿದ್ದಳು. ಆದಾರೂ ಭಯದಿಂದ ಬಾಯಿಬಿಟ್ಟಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸಂತ್ರಸ್ತೆ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ರಿಜ್ವಾನ್ ಹಾಗೂ ಅಬಾಜ್ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.