ಉತ್ತರಕಾಶಿ: ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ 28 ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಬಳಿ ನಿನ್ನೆ ಸಂಭವಿಸಿದ ಭೀಕರ ಮೇಘಸ್ಫೋಟ, ಹಠಾತ್ ಪ್ರವಾಹ, ಭೂಕುಸಿತದ ಬಳಿಕ 28 ಜನರು ಸಂಪರ್ಕಕ್ಕೆ ಸಿಗುತ್ತಿಲ್ಲ. ಕೇರಳ ಮೂಲದ 28 ಜನರು ಉತ್ತರಾಖಂಡದಿಂದ ಗಂಗೋತ್ರಿ ಮಾರ್ಗವಾಗಿ ತೆರಳಿದ್ದರು ಎನ್ನಲಾಗಿದೆ.
10 ದಿನಗಳ ಪ್ರವಾಸಕ್ಕೆಂದು ಉತ್ತರಾಖಂಡಕ್ಕೆ ತೆರಳಿದ್ದರು. ಆದರೆ ಪ್ರವಾಹ ಹಾಗೂ ಭೂಕುಸಿತದ ಬಳಿಕ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಕುಟುಂಬದವರು ಆತಂಕಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.