ಡೆಹ್ರಾಡೂನ್: ಉತ್ತರಾಖಂಡದ ಉತ್ತರ ಕಾಶಿಯಲ್ಲಿ ಸಂಭವಿಸಿದ ಮೇಘಸ್ಫೋಟ, ಹಠಾತ್ ಪ್ರವಾಹದಲ್ಲಿ ರಕ್ಷಣ ಅಕಾರ್ಯಾಚರಣೆ ಮುಂದುವರೆದಿದೆ. ಈವರೆಗೆ 700 ಜನರನ್ನು ರಕ್ಷಿಸಲಾಗಿದೆ.
ಉತ್ತರಕಾಶಿಯ ಧರಾಲಿಯಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ನೂರಾರು ಜನರು ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆ ಮುಂದುವರೆದಿದೆ. ಘಟನೆ ನಡೆದ ದಿನದಿಂದ ಈವರೆಗೆ 700 ಜನರನ್ನು ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡ ರಕ್ಷಿಸಿದೆ.
ನಾಪತ್ತೆಯಾಗಿರುವ 250 ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇನ್ನು ರಕ್ಷಣಾ ಕಾರ್ಯಾಚರಣೆ ವೇಳೆ 8 ಜನ ಯೋಧರು ನಾಪತ್ತೆಯಾಗಿದ್ದು, ಅವರಿಗಾಗಿಯೂ ಶೋಧ ನಡೆಸಲಾಗುತ್ತಿದೆ.