ಬೈಕ್ ಸೈಲೆನ್ಸರ್ ಮಾರ್ಪಡಿಸಿದ್ದವನಿಗೆ ಸಖತ್‌ ಶಾಕ್; ಮೀಮ್‌ ಶೇರ್‌ ಮಾಡಿ‌ ಪೊಲೀಸರ ಟಾಂಗ್

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು,‌ ಹೆಚ್ಚು ಲೈಕ್ಸ್ ಪಡೆಯಲು ಯುವಕರು ವಿಚಿತ್ರ ಸಾಹಸಗಳಿಗೆ ಕೈ ಹಾಕುತ್ತಾರೆ. ಅಂಥದ್ದೊಂದು ವಿಚಾರದಲ್ಲಿ ಯುವಕನೊಬ್ಬನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.

ತನ್ನ ಬೈಕಿನ ಸೈಲೆನ್ಸರ್ ಮಾರ್ಪಡಿಸಿ ದೊಡ್ಡ ಶಬ್ದವನ್ನು ಸೃಷ್ಟಿಸಿದ ವ್ಯಕ್ತಿ ಅಂದರ್ ಆಗಿದ್ದಾನೆ. ಇದಷ್ಟೇ ಅಲ್ಲ, ಉತ್ತರಾಖಂಡ ಪೊಲೀಸರು ಇದರ ಬಗ್ಗೆ ಉಲ್ಲಾಸದ ವೀಡಿಯೊವನ್ನು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೊದ ಮೊದಲ ಭಾಗವು ರೀಲ್ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಯನ್ನು ತೋರಿಸುತ್ತದೆ ಮತ್ತು ಜೋರಾಗಿ ಪಟಾಕಿ ಶಬ್ದಗಳನ್ನು ಮಾಡುವ ಮೂಲಕ ತನ್ನ ಮಾರ್ಪಡಿಸಿದ ಸೈಲೆನ್ಸರ್ ಅನ್ನು ಪ್ರದರ್ಶಿಸುತ್ತದೆ.

ಇದರ ನಡುವೆ ನಟ ಪರೇಶ್ ರಾವಲ್ ಅವರ ಮೀಮ್ ಅನ್ನು ಬಳಸಲಾಗಿದೆ. ವೀಡಿಯೊದ ಎರಡನೇ ಭಾಗದಲ್ಲಿ, ಪೊಲೀಸರು ಬಂಧಿತ ಯುವಕನೊಂದಿಗೆ ಪೊಲೀಸ್ ಠಾಣೆಯ ಮುಂದೆ ನಿಂತಿರುವುದನ್ನು ಕಾಣಬಹುದು.

“ಪ್ಯಾಶನ್ ಆಫ್ ರೀಲ್ ಲ್ಯಾಂಡ್ಸ್ ಯು ಇನ್ ರಿಯಲ್ ಲಾಕಪ್” ಎಂಬ ಸಂದೇಶದೊಂದಿಗೆ ವಿಡಿಯೋ ಹಂಚಿಕೊಂಡಾಗಿನಿಂದ ಭಾರೀ ವೀವ್ಸ್, ಲೈಕ್ಸ್ ಪಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read