BIG NEWS: ರಸ್ತೆ ಬದಿಯ ಗುಡಿಸಲಿಗೆ ನುಗ್ಗಿದ ಡಂಪರ್: ಗರ್ಭಿಣಿ ಸೇರಿ ನಾಲ್ವರು ದುರ್ಮರಣ

ಲಖನೌ: ಚಾಲಕನ ನಿಯಂತ್ರಣ ತಪ್ಪಿ ಡಂಪರ್ ಲಾರಿಯೊಂದು ರಸ್ತೆ ಬದಿಯ ಗುಡಿಸಲಿಗೆ ನುಗ್ಗಿದ್ದು, ಅಪಘಾತದಲ್ಲಿ ಗರ್ಭಿಣಿ ಸೇರಿ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಅಯೋಧ್ಯೆ ಹೆದ್ದಾರಿಯಲ್ಲಿ ನಡೆದಿದೆ.

ಬಿಬಿಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ತಡರಾತ್ರಿ ಒಂದು ಗಂಟೆ ಸುಮಾರಿಗೆ ಡಂಪರ್ ಏಕಾಏಕಿ ಗುಡಿಸಲಿಗೆ ನುಗ್ಗಿದ್ದು, ಮಲಗಿದ್ದ ಕುಟುಂಬದ ಮೇಲೆಯೆ ಹರಿದಿದೆ. ಘಟನೆಯಲ್ಲಿ 8 ತಿಂಗಳ ಗರ್ಭಿಣಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಬಾರಾಬಂಕಿಯ ಜೈತ್ ಪುರ ನಿವಾಸಿ ಉಮೇಶ್ (35) ಟೈಲ್ಸ್ ಕುಶಲಕರ್ಮಿ, ಪತ್ನಿ ನೀಲಂ, ಪುತ್ರ ಗೋಲು(4), ಮಗಳು ಸನ್ನಿ (13) ಮೃತಪಟ್ಟಿದ್ದಾರೆ. ಇನ್ನೋರ್ವ ಮಗಳು ವೈಷ್ಣವಿ ಬದುಕುಳಿದಿದ್ದಾಳೆ. ಮೃತ ಉಮೇಶ್ ಕುಟುಂಬ ಅಯೋಧ್ಯೆ ಹೆದ್ದಾರಿ ಬಳಿ ಗುಡಿಸಲಿನಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು.

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹಗಳನ್ನು ಹೊರತೆಗಿದ್ದಾರೆ. ಡಂಪರ್ ಚಾಲಕನನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read