ಯಾಣದಲ್ಲಿ ದೇಶದ ಮೊದಲ ಭಾರತ್ ಏರ್ ಫೈ 7 ಸೇವೆ ಲೋಕಾರ್ಪಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ಯಾಣದಲ್ಲಿ ದೇಶದ ಮೊದಲ ಭಾರತ್ ಏರ್ ಫೈ 7 ನೆಟ್ವರ್ಕ್ ಸೇವೆಯನ್ನು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಲೋಕಾರ್ಪಣೆಗೊಳಿಸಿದ್ದಾರೆ.

ನಂತರ ಮಾತನಾಡಿದ ಸಂಸದ ಹೆಗಡೆ, ಭಾರತ್ ಸಂಚಾರ ನಿಗಮ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಜಪಾನ್ ತಂತ್ರಜ್ಞಾನ ಹೊಂದಿರುವ ಏರ್ ಫೈ 7 ಮೂಲಕ ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲಿಯೂ ವೈಫೈ ಮೂಲಕ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಏರ್ ಫೈ 7 ತಂತ್ರಜ್ಞಾನದ ಮೂಲಕ ಒಂದೆರಡು ಕಿಲೋಮೀಟರ್ ವರೆಗೂ ವೈಫೈ ಮೂಲಕ ಇಂಟರ್ನೆಟ್ ಸೌಲಭ್ಯ ಪಡೆದುಕೊಳ್ಳಬಹುದು. ಅರಣ್ಯ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ಈ ತಂತ್ರಜ್ಞಾನ ಪರಿಹಾರವಾಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read