ಚಾರಣ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಉತ್ತರ ಕನ್ನಡ ಜಿಲ್ಲಾಡಳಿತ: 32 ಕಡೆ ಚಾರಣಕ್ಕೆ ಅವಕಾಶ

ಕಾರವಾರ: ಚಾರಣ ಪ್ರಿಯರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಿಹಿಸುದ್ದಿ ನೀಡಿದೆ. ಈವರೆಗೆ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲೆಗಳು ಚಾರಣಕ್ಕೆ ಹೆಸರುವಾಸಿಯಾಗಿತ್ತು. ಇದೀಗ ಉತ್ತರ ಕನ್ನಡ ಜಿಲ್ಲಾಡಳಿತ ಉತ್ತರ ಕನ್ನಡದಲ್ಲಿಯೂ ಚಾರಣಕ್ಕೆ ಅತ್ಯುತ್ತಮ ಜಾಗಗಳಿದ್ದು, ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.

ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದು, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಚಾರಣಕ್ಕೆ ಸರ್ವೆ ಮಾಡಿದ್ದು, ೩೨ ಸ್ಥಳಗಳಲ್ಲಿ ಚಾರಣ ಪಥ ಗುರುತಿಸಿದೆ ಎಂದು ತಿಳಿಸಿದ್ದಾರೆ.

32 ಸ್ಥಳಗಳಲ್ಲಿ ಚಾರಣಕ್ಕೆ ಅನುಮತಿ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡಿದ ಬಳಿಕ 32 ಕಡೆ ಚಾರಣಕ್ಕೆ ಅವಕಾಶ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅದ್ಭುತವಾದ ಸ್ಥಳಗಳಿವೆ. ಯಾರೂ ಕಾಣದ ಪ್ರದೇಶಗಳನ್ನು ಇನ್ಮುಂದೆ ಕಾಣಬಹುದಾಗಿದೆ. ಅನುಮತಿ ಸಿಗುತ್ತಿದ್ದಂತೆಯೇ ಅನುಭವಿ ಗೈಡ್ ಮೂಲಕ ಚಾರಣಕ್ಕೆ ಅವಕಾಶ ನೀಡಲಾಗುವುದು ಎಂದರು.

ವೆಬ್ ಸೈಟ್ ಹಾಗೂ ಪ್ರವಾಸೋದ್ಯಮ ಇಲಾಖೆ ಕಮಿಟಿ ಮೂಲಕ ಪ್ರಚಾರ ನಡೆಸಲಾಗುವುದು. ಚಾರಣ ಸ್ಥಳಗಳನ್ನು ಅರಣ್ಯ ಇಅಲಖೆ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಶೇ.72ರಷ್ಟು ಅರಣ್ಯವಿದ್ದರೂ ಅಧಿಕೃತವಾಗಿ ಒಂದೇ ಚಾರಣ ಪಥವಿತ್ತು. ಕುಳಗಿ ನೇಚರ್ ಕ್ಯಾಂಪ್ ನಲ್ಲಿ ಮಾತ್ರ ಚಾರಣಕ್ಕೆ ಅವಕಾಶವಿತ್ತು. ಆದರೆ ಅನೇಕರು ಇಲಾಖೆ ಕಣ್ತಪ್ಪಿಸಿ, ನಿಷೇಧಿತ ಸ್ಥಳಗಳಿಗೆ ಚಾರಣಕ್ಕೆ ಹೋಗಿ ಅವಘಡಕ್ಕೀಡಾಗಿದ್ದಾರೆ. ಇಂತಹ ಅನಾಹುತ ತಪ್ಪಿಸಲು ಅರಣ್ಯ ಇಲಾಖೆ 32 ಸ್ಥಳಗಳನ್ನು ಗುರುತಿಸಿದ್ದು, ಸುರಕ್ಷಿತ ಚಾರಣಕ್ಕೆ ಅವಕಾಶ ನೀಡಲಾಗುವುದು. ಶೀಘ್ರದಲ್ಲೇ ಹೊಸ ವೆಬ್ ಸೈಟ್ ಮೂಲಕ ಉತ್ತರ ಕನ್ನಡ ಪ್ರವಾಸಿಗರಿಗೆ ಇಲ್ಲಿನ ದೇವಸ್ಥಾನ, ಪ್ರವಾಸಿ ತಾಣ, ಐತಿಹಾಸಿಕ ಸ್ಥಳಗಳು, ಕಡಲ ಕಿನಾರೆ ಸ್ಥಳಗಳು, ಚಾರಣ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ವಿವರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read