ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ವರಲ್ಲಿ ಮಂಗನಕಾಯಿಲೆ (ಕೆ ಎಫ್ ಡಿ) ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಡಿನತ್ತ ತೆರಳದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟದ ರೇವಣಕಟ್ಟದ ಹಾಗೂ ಸಿದ್ದಾಪುರ ತಾಲೂಕಿನ ಕಾನಸೂರಿನ ಇಬ್ಬರಲ್ಲಿ ಹಾಗೂ ಹೊನ್ನಾವರ ತಾಲೂಕಿನ ಜನಕಾಡಕಲ್ ಗ್ರಾಮದ ಇಬ್ಬರಲ್ಲಿ ಕೆ ಎಫ್ ಡಿ ಪತ್ತೆಯಾಗಿದೆ.
ಸಿದ್ದಾಪುರದಲ್ಲಿ ೧೪ ವರ್ಷದ ಬಾಲಕನಲ್ಲಿ ಹಾಗೂ ರೇವಣಕಟ್ಟಾದಲ್ಲಿ ೫೮ ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಹೊನ್ನಾವರದಲ್ಲಿ ಇಬ್ಬರು ಮಹಿಳೆಯಲ್ಲಿ ಸೋಂಕು ದೃಢ ಪಟ್ಟಿದೆ. ಬಿಸಿಲಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಸೋಂಕು ಹೆಚ್ಚಾಗುತ್ತಿದೆ. ರೈತರು ಕಾಡಿಗೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.