ಪರ ಪುರುಷನೊಂದಿಗೆ ‘ಪತ್ನಿ ವಿನಿಮಯ’ ಕ್ಕೆ ಮುಂದಾದ ಪತಿ; ಒಪ್ಪದ್ದಕ್ಕೆ ಚಿತ್ರಹಿಂಸೆ ನೀಡಿದ ಪಾಪಿ

ವಿದೇಶದಲ್ಲಿ ಹೆಚ್ಚಾಗಿ ಕಂಡುಬರುವ ಪತ್ನಿ ವಿನಿಮಯ (wife swapping ) ಭಾರತಕ್ಕೂ ಕಾಲಿಟ್ಟಿದ್ದು ಸಂಗಾತಿಯನ್ನು ಬಲವಂತವಾಗಿ ಪತ್ನಿ ವಿನಿಮಯ ಮಾಡಿಕೊಳ್ಳುವ ಕೃತ್ಯಕ್ಕೆ ಒತ್ತಾಯಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪತ್ನಿ ವಿನಿಮಯಕ್ಕೆ ಒಪ್ಪದ ಆಕೆಯನ್ನು ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಇಷ್ಟೇ ಅಲ್ಲದೇ ಆಕೆಯ ಅಶ್ಲೀಲ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉತ್ತರಪ್ರದೇಶ ಲಕ್ನೋದ ಆಶಿಯಾನಾ ಪ್ರದೇಶದ ನಿವಾಸಿ 40 ವರ್ಷದ ಪತ್ನಿ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.

ಆರೋಪಿಯನ್ನು 2008ರಲ್ಲಿ ಮದುವೆಯಾಗಿದ್ದ ಮಹಿಳೆಗೆ ಹೆಣ್ಣು ಮಗುವಿದೆ. ಪತಿಯ ಕ್ರೂರ ವರ್ತನೆ ಮತ್ತು ಅನೈತಿಕ ಕೃತ್ಯಗಳಿಗೆ ಒಳಗಾಗಲು ಹಾಕುತ್ತಿದ್ದ ಒತ್ತಡ ತಡೆಯಲಾರದೇ ತವರು ಮನೆಗೆ ಹೋಗಬೇಕಾಯಿತು ಎಂದು ಮಹಿಳೆ ದೂರಿದ್ದಾರೆ. ಮದುವೆಯಾದಾಗಿನಿಂದಲೂ ತನಗೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಅದು ಹೆಚ್ಚಾಯಿತು ಎಂದು ಆರೋಪಿಸಿದ್ದಾರೆ.

ವರದಕ್ಷಿಣಿಗಾಗಿ ನನಗೆ ಚಿತ್ರಹಿಂಸೆ ನೀಡಲಾಗಿತ್ತು. ಆದರೆ ನಾನು ಈ ಮದುವೆಯನ್ನು ಉಳಿಸಿಕೊಳ್ಳಲು ಪೊಲೀಸರಿಗೆ ದೂರು ನೀಡಲಿಲ್ಲ. ನನ್ನ ಪತಿ ಮತ್ತು ಅತ್ತೆ ನನಗೆ ದಿನಗಟ್ಟಲೆ ಊಟ ನೀಡುತ್ತಿರಲಿಲ್ಲ. ಹೀಗಾಗಿ ನಾನು ಹಸಿವಿನಿಂದ ಬಳಲುತ್ತಿದ್ದೆ ಎಂದು ಆರೋಪಿಸಿರುವ ಮಹಿಳೆ ತಾನು ಮಲಗಿದ್ದಾಗ ಪತಿ ತನ್ನ ಫೋಟೋಗಳನ್ನು ಕ್ಲಿಕ್ಕಿಸಿ ಅವರ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

ಪತಿ ನಾನು ಇಲ್ಲದಿದ್ದಾಗ ಹೆಚ್ಚು ಸಮಯ ಮಹಿಳೆಯರೊಂದಿಗೆ ಮಾತನಾಡುತ್ತಾರೆ. ರಾತ್ರಿಯಲ್ಲಿ ಮಹಿಳೆಯರೊಂದಿಗೆ ಮಾತನಾಡುತ್ತಿದ್ದ ಆತನನ್ನು ಹಿಡಿದು ಆಕ್ಷೇಪಿಸಿದ್ದಕ್ಕಾಗಿ ಥಳಿಸಿದ್ರು. ದಿನದಿಂದ ದಿನಕ್ಕೆ ತನ್ನ ಗಂಡನ ಕೋಪ ಹೆಚ್ಚುತ್ತಿದೆ ಎಂದು ಹೇಳಿದ ಮಹಿಳೆ, “ಅವನ ಸ್ನೇಹಿತರನ್ನು ಒಳಗೊಂಡ ಪತ್ನಿ ವಿನಿಮಯದಲ್ಲಿ ನಾನು ಬಲವಂತವಾಗಿ ಪಾಲ್ಗೊಳ್ಳುವಂತೆ ಒತ್ತಾಯಿಸಲಾಯಿತು. ಅಪರಿಚಿತ ದಂಪತಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ತನ್ನ ಮೇಲೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read