ದಾಖಲೆ ಪತ್ರಗಳ ಮೇಲೆ ಮೃತ ಮಹಿಳೆಯ ಹೆಬ್ಬೆರಳಿನ ಗುರುತು ಒತ್ತಿದ ವ್ಯಕ್ತಿ: ಆಘಾತಕಾರಿ ವಿಡಿಯೋ ವೈರಲ್

ಆಗ್ರಾ: ಮಕ್ಕಳನ್ನು ಚೆನ್ನಾಗಿ ನೋಡಿ ದೊಡ್ಡವರನ್ನಾಗಿ ಮಾಡುವ ತಂದೆ-ತಾಯಿಗಳು ನಂತರ ತಮ್ಮ ಮಕ್ಕಳಿಂದಲೇ ಕಡೆಗಣನೆಗೆ ಒಳಗಾಗುತ್ತಾರೆ. ಆಸ್ತಿಗಾಗಿ ಮಕ್ಕಳು ತಮ್ಮ ಪೋಷಕರಿಗೆ ಇನ್ನಿಲ್ಲದ ಕಾಟ ಕೊಡುತ್ತಾರೆ. ಇದೀಗ ದಾಖಲೆಗಳಲ್ಲಿ ಮೃತ ಮಹಿಳೆಯ ಹೆಬ್ಬೆರಳಿನ ಗುರುತನ್ನು ವ್ಯಕ್ತಿಯೊಬ್ಬ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ವಂಚನೆಯಿಂದ ಹೆಬ್ಬೆರಳಿನ ಗುರುತನ್ನು ಪಡೆದಿಕೊಳ್ಳುತ್ತಿದ್ದಾನೆ. ಈ ನೀಚತನದ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

45 ಸೆಕೆಂಡ್‌ಗಳ ವಿಡಿಯೋದಲ್ಲಿ ವೃದ್ಧೆಯ ಶವವನ್ನು ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಸಲಾಗಿದೆ. ವ್ಯಕ್ತಿಯು ಮೃತ ಮಹಿಳೆಯ ಹೆಬ್ಬೆರಳಿನ ಮುದ್ರೆಗಳನ್ನು ಕೈಯಲ್ಲಿ ಹಿಡಿದುಕೊಂಡ ಪತ್ರಗಳಿಗೆ ಒತ್ತುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವ್ಯಕ್ತಿನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವಾರು ಮಂದಿ ಬಳಕೆದಾರರು ಈ ವಿಡಿಯೋವನ್ನು ರೀಟ್ವೀಟ್ ಮಾಡಿ ನ್ಯಾಯ ಕೇಳಿದ್ದಾರೆ.

https://twitter.com/AmirqadriAgra/status/1645332817428238336?ref_src=twsrc%5Etfw%7Ctwcamp%5Etweetembed%7Ctwterm%5E1645332817428238336%7Ctwgr%5Ebcc757ca370ea34a2aec0021ebdac61021099592%7Ctwcon%5Es1_&ref_url=https%3A%2F%2Fwww.freepressjournal.in%2Fviral%2Futtar-pradesh-man-takes-thumb-impression-of-dead-woman-on-documents-in-agra-shocking-video-goes-viral

https://twitter.com/RoliTiwariMish1/status/1645340719585042433?ref_src=twsrc%5Etfw%7Ctwcamp%5Etweetembed%7Ctwterm%5E1645340719585042433%7Ctwgr%5Ebcc757ca370ea34a2aec0021ebdac61021099592%7Ctwcon%5Es1_&ref_url=https%3A%2F%2Fwww.freepressjournal.in%2Fviral%2Futtar-pradesh-man-takes-thumb-impression-of-dead-woman-on-documents-in-agra-shocking-video-goes-viral

https://twitter.com/RoliTiwariMish1/status/1645340719585042433?ref_src=twsrc%5Etfw%7Ctwcamp%5Etweetembed%7Ctwterm%5E1645422369278951425%7Ctwgr%5Ebcc757ca370ea34a2aec0021ebdac61021099592%7Ctwcon%5Es2_&ref_url=https%3A%2F%2Fwww.freepressjournal.in%2Fviral%2Futtar-pradesh-man-takes-thumb-impression-of-dead-woman-on-documents-in-agra-shocking-video-goes-viral

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read