ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಹೈಟೆನ್ಷನ್ ತಂತಿ ತುಂಡಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ದಂಪತಿ ಸಜೀವ ದಹನವಾಗಿದ್ದಾರೆ. ಮೃತರನ್ನು ವೇದಪಾಲ್ ಮತ್ತು ಮೀನಾ ಎಂದು ಗುರ್ತಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ಹರಿದಾಡುತ್ತಿದ್ದು, ದುರ್ಘಟನೆಯ ಸ್ಥಳದಲ್ಲಿದ್ದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಬೈಕ್ ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಗಿದೆ. ಉರಿಯುತ್ತಿರುವ ಮೋಟಾರ್‌ಸೈಕಲ್‌ನ ಪಕ್ಕದಲ್ಲಿ ದಂಪತಿ ಶವ ಬಿದ್ದಿದ್ದು ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಈ ಭಯಾನಕ ದೃಶ್ಯ ಬೆಚ್ಚಿ ಬೀಳಿಸಿದೆ.
https://twitter.com/SachinGuptaUP/status/1819375476437041450?ref_src=twsrc%5Etfw%7Ctwcamp%5Etweetembed%7Ctwterm%5E1819375476437041450%7Ctwgr%5E44f78d0ec

 
			 
		 
		 
		 
		 Loading ...
 Loading ... 
		 
		 
		