ಶಾಲಾ ಬಾಲಕಿಯೊಬ್ಬಳನ್ನು ಅಪ್ರಾಪ್ತ ಬಾಲಕನೊಬ್ಬ ಹಾಡಹಗಲೇ ನಿರ್ದಯವಾಗಿ ಎಳೆದಾಡುತ್ತಿರುವ ಘಟನೆಯೊಂದು ಉತ್ತರ ಪ್ರದೇಶದ ಚಂಡೌಲಿಯಲ್ಲಿ ಘಟಿಸಿದೆ. ಈ ಘಟನೆ ಮುಘಲ್‌ಸಾರಾಯ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚಂಡೌಲಿಯ ರಸ್ತೋಗಿ ಎಂಬಲ್ಲಿ ಘಟಿಸಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಲೇ ಚಂಡೌಲಿ ಪೊಲೀಸ್ ಠಾಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಬಾಲಕನನ್ನು ವಶಕ್ಕೆ ಪಡೆದಿದೆ.
ನೀಲಿ ಸಮವಸ್ತ್ರ ಧರಿಸಿದ ಬಾಲಕಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅವರು ರಸ್ತೆ ದಾಟಲು ಮುಂದಾಗುತ್ತಲೇ, ಹುಡುಗನೊಬ್ಬ ಅವರ ಹಾದಿಗೆ ಅಡ್ಡ ಬಂದು ಒಬ್ಬ ಬಾಲಕಿಯನ್ನು ರಸ್ತೆಯಲ್ಲೇ ಎಳೆದಾಡುತ್ತಾನೆ.
ಇದಕ್ಕೆ ಪ್ರತಿಭಟಿಸಿದ ಬಾಲಕಿ ಜೋರಾಗಿ ಕಿರುಚುತ್ತಾಳೆ. ಆದರೂ ಬಾಲಕ ಅದನ್ನು ಕೇರ್ ಮಾಡುವುದಿಲ್ಲ. “ನನ್ನನ್ನೇಕೆ ಹೀಗೆ ಎಳೆದಾಡುತ್ತಿರುವೆ?” ಎಂದು ಬಾಲಕಿ ಆತನಿಗೆ ಕೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಬಾಲಕಿಗೆ ಆ ಹುಡುಗ ಯಾರೆಂದು ತಿಳಿದಿದ್ದರೂ ಸಹ ಆತ ಆಕೆಯೊಂದಿಗೆ ವರ್ತಿಸುತ್ತಿರುವ ರೀತಿ ಕೆಟ್ಟದಾಗಿರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಆದರೆ ದಾರಿಹೋಕರಲ್ಲಿ ಯಾರೂ ಸಹ ಆಕೆಯ ರಕ್ಷಣೆಗೆ ಬರುತ್ತಿಲ್ಲ.
ಘಟನೆ ಕುರಿತಂತೆ ಚಂಡೌಲಿ ಪೊಲೀಸರು ಹೇಳಿಕೆ ಕೊಟ್ಟಿದ್ದು, 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗನನ್ನು ವಶಕ್ಕೆ ಪಡೆದಿರುವುದಾಗಿಯೂ, ಸಂತ್ರಸ್ತೆ ಏಳನೇ ತರಗತಿ ವಿದ್ಯಾರ್ಥಿನಿ ಎಂದೂ ತಿಳಿಸಿದ್ದಾರೆ.
https://twitter.com/chandaulipolice/status/1635597491218382849?ref_src=twsrc%5Etfw%7Ctwcamp%5Etweetembed%7Ctwterm%5E1635597491218382849%7Ctwgr%5Ed31ec4831baaa7a6bdb496b44c024b638854115b%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-class-7-girl-dragged-by-minor-in-broad-daylight-in-ups-chandauli-police-detains-boy