ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ನಾಣ್ನುಡಿ ಇದೆ. ಇಲ್ಲೊಬ್ಬ ಸಂಸದರು ಎರಡೂ ಕಾರ್ಯವನ್ನು ಮಾಡಿದ್ದು, ಆದರೆ ಇದಕ್ಕಾಗಿ ಅವರು ಬಳಸಿಕೊಂಡಿರುವುದು ಸ್ಥಳೀಯ ಪ್ರದೇಶಾಭಿವೃದ್ಧಿಗಾಗಿ ತಮಗೆ ನೀಡುವ ನಿಧಿಯನ್ನು. ಆ ಸಂಸದರೇ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಹೌದು, ತೆಲಂಗಾಣದ ಆದಿಲಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸೋಯಂ ಬಾಪು ರಾವ್, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿಯಲ್ಲಿ ತಮಗೆ ಬಂದ 2.5 ಕೋಟಿ ರೂಪಾಯಿಗಳಲ್ಲಿ ಒಂದಷ್ಟು ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಉಳಿದ ಹಣವನ್ನು ಮನೆ ಕಟ್ಟಲು ಹಾಗೂ ಮದುವೆ ಮಾಡಲು ಬಳಸಿಕೊಂಡಿದ್ದಾರಂತೆ.
ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ವೇಳೆ ಸಂಸದ ಸೋಯಂ ಬಾಪು ರಾವ್ ಈ ಹೇಳಿಕೆ ನೀಡಿದ್ದು, ಬಹುತೇಕ ಸಂಸದರು ಈ ನಿಧಿಯನ್ನು ಪೂರ್ತಿ ನುಂಗಿ ಹಾಕುತ್ತಾರೆ. ಆದರೆ ನಾನು ನಿಮಗೆ ಸತ್ಯ ಹೇಳುತ್ತಿದ್ದೇನೆ. ಈ ಧೈರ್ಯವನ್ನು ಉಳಿದ ಸಂಸದರು ತೋರುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ವಿವಾದಕ್ಕೆ ಕಾರಣವಾಗಿದೆ.
https://twitter.com/PuttaVishnuVR/status/1670974430888202241?ref_src=twsrc%5Etfw%7Ctwcamp%5Etweetembed%7Ctwterm%5E1670974430888202241%7Ctwgr%5E095df11b8e930ebe8591c052b27b10f6096ac042%7Ctwcon%5Es1_&ref_url=https%3A%2F%2Fwww.india.com%2Ftelangana%2Fmplads-fund-sons-marriage-built-house-telangana-bjp-mp-soyam-bapu-rao-lok-sabha-adilabad-video-viral-6122678%2F