ಚರ್ಮದ ಹೊಳಪು ಹೆಚ್ಚಿಸಲು ಬಳಸಿ ಅರಿಶಿನದ ಈ ಫೇಸ್‌ ಪ್ಯಾಕ್‌

ಅರಿಶಿನವನ್ನು ಆರೋಗ್ಯ ವೃದ್ಧಿಸಲು ಮಾತ್ರವಲ್ಲ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೂಡ ಬಳಸಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಹಾಗಾಗಿ ಚರ್ಮದ ಹೊಳಪು ಹೆಚ್ಚಿಸಲು ಅರಿಶಿನದಿಂದ ಈ 2 ಬಗೆಯ ಉತ್ಪನ್ನ ತಯಾರಿಸಿ ಬಳಸಿ.

*ಚರ್ಮವನ್ನು ಬೆಳ್ಳಗಾಗಿಸಲು ಅರಿಶಿನದಿಂದ ಕ್ಲೆನ್ಸರ್ ತಯಾರಿಸಿ. 6 ಚಮಚ ಕಡಲೆ ಹಿಟ್ಟು, 1 ಚಮಚ ಅರಿಶಿನ, ಕಿತ್ತಳೆ ಸಿಪ್ಪೆ ಪುಡಿ 2 ಚಮಚ ಇವಿಷ್ಟನ್ನು ಮಿಶ್ರಣ ಮಾಡಿ. ಅದರಿಂದ 3 ಚಮಚ ಪುಡಿಯನ್ನು ತೆಗೆದುಕೊಂಡು ನೀರಿನಲ್ಲಿ ಮಿಕ್ಸ್ ಮಾಡಿ ಅದನ್ನು ಮುಖ ಹಾಗೂ ದೇಹಕ್ಕೆ ಹಚ್ಚಿ ಮಸಾಜ್ ಮಾಡಿ ವಾಶ್ ಮಾಡಿ.

*ಅರಿಶಿನದಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ. 3 ಚಮಚ ಅಲೋವೆರಾ ಜೆಲ್ ಗೆ 1 ಚಮಚ ರೋಸ್ ವಾಟರ್, ¼ ಚಮಚ ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಕಲೆಗಳನ್ನು ನಿವಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read