ಈ ಟೀ ಬಳಸಿ ಬಿಳಿ ಕೂದಲಿನ ಸಮಸ್ಯೆ ಪರಿಹರಿಸಿಕೊಳ್ಳಿ

ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆಯೂ ಕೂಡ ಒಂದು. ಇದು ಅನೇಕರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಬ್ಲ್ಯಾಕ್ ಟೀ ಬಳಸಿ.

ಬ್ಲ್ಯಾಕ್ ಟೀಯಲ್ಲಿ ಟ್ಯಾನಿಕ್ ಆಮ್ಲವಿದೆ ಇದು ಕೂದಲನ್ನು ಕಪ್ಪಾಗಿಸುತ್ತದೆ. 2 ಕಪ್ ನೀರು ತೆಗೆದುಕೊಂಡು ಅದರಲ್ಲಿ 5-6 ಟೀ ಎಲೆಗಳನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ. ಬಳಿಕ ಅದು ಉಗುರುಬೆಚ್ಚಗಾದ ಮೇಲೆ ಅದನ್ನು ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

 ಬ್ಲ್ಯಾಕ್ ಟೀ ಮತ್ತು ತುಳಸಿ ಎಲೆಯಿಂದ ಕೂಡ ಕೂದಲು ಬಿಳಿಯಾಗುವ ಸಮಸ್ಯೆಯನ್ನು ದೂರ ಮಾಡಬಹುದು. ಒಂದು ಕಪ್ ನೀರಿನಲ್ಲಿ 5 ಚಮಚ ಬ್ಲ್ಯಾಕ್ ಟೀ ಮತ್ತು 5 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಅದು ತಣ್ಣಗಾದ ಬಳಿಕ ಅದನ್ನು ಕೂದಲಿಗೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ಕೂದಲನ್ನು ತೊಳೆಯಿರಿ. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read