ಚಳಿಗಾಲದ ಶುಷ್ಕ ಚರ್ಮದಿಂದ ಬೇಸತ್ತಿರುವಿರಾ…..? ಹೊಳಪು ಪಡೆಯಲು ಈ ಫೇಸ್​ಪ್ಯಾಕ್​ ಟ್ರೈ ಮಾಡಿ

ಚಳಿಗಾಲದಲ್ಲಿ ಬಹುತೇಕ ಪ್ರತಿಯೊಬ್ಬರ ಚರ್ಮವು ಒಣಗುತ್ತದೆ ಮತ್ತು ಹೊಳಪನ್ನು ಕಳೆದುಕೊಳ್ಳುತ್ತದೆ. ಚಳಿಗಾಲದ ಹವಾಮಾನದಿಂದ ಚರ್ಮ ನಿರ್ಜಲೀಕರಣಗೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್​ಗಳ ಮೊರೆ ಹೋಗುವ ಬದಲು ಇಲ್ಲೊಂದು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಫೇಸ್​​ಪ್ಯಾಸ್​ ಬಗ್ಗೆ ತಿಳಿಸಲಾಗಿದೆ.

ಇದು ಕುಂಬಳಕಾಯಿಯ ಫೇಸ್​ಪ್ಯಾಕ್​. ವರ್ಷಪೂರ್ತಿ ಮಾಡಬಹುದಾದರೂ, ಚಳಿಗಾಲದಲ್ಲಿ ಇದನ್ನು ಮಾಡಿದರೆ ಚರ್ಮ ಹೊಳಪು ಪಡೆದುಕೊಳ್ಳುತ್ತದೆ. ವಿಟಮಿನ್ ಎ, ಸಿ ಮತ್ತು ಇ, ಆಂಟಿಆಕ್ಸಿಡೆಂಟ್‌ಗಳು, ಸತು, ಪೊಟ್ಯಾಸಿಯಮ್ ಮತ್ತು ಹಣ್ಣಿನ ಕಿಣ್ವಗಳಲ್ಲಿ ಹೇರಳವಾಗಿರುವ ಕಾರಣ ಇದು ನೈಸರ್ಗಿಕ ಚರ್ಮಕ್ಕೆ ಸೂಪರ್‌ಹೀರೋ ಆಗಿದೆ.

ಬೇಕಾಗಿರುವ ಸಾಮಗ್ರಿಗಳು:

ಕುಂಬಳಕಾಯಿಯ 1 ಸಣ್ಣ ಸ್ಲೈಸ್ (ಸುಮಾರು ½ ಕಪ್)

1 ಹಸಿ ಮೊಟ್ಟೆ

½ ಟೀ ಚಮಚ ಜೇನುತುಪ್ಪ

½ ಟೀ ಚಮಚ ಆಪಲ್ ಸೈಡರ್ ವಿನೆಗರ್

ಕುಂಬಳಕಾಯಿಯ ತಿರುಳನ್ನು ತೆಗೆದು ಅದನ್ನು ಸ್ಮೂತ್​ ಮಾಡಿಕೊಳ್ಳಿ. ಇದಕ್ಕೆ ಮೊಟ್ಟೆ, ಜೇನುತುಪ್ಪ ಮತ್ತು ಆಪಲ್ ಸೈಡರ್ ವಿನೆಗರ್ ನೊಂದಿಗೆ ಮಿಶ್ರಣ ಮಾಡಿ. ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಫೇಸ್​ಪ್ಯಾಕ್​ ಮಾಡಿಕೊಳ್ಳಿ.

ಸುಮಾರು 15-20 ನಿಮಿಷಗಳ ಕಾಲ ಚರ್ಮದ ಮೇಲೆ ಇದು ಇರಲಿ. ನಂತರ ಮುಖವನ್ನು ತೊಳೆಯಿರಿ.

ಕುಂಬಳಕಾಯಿಯ ಪ್ರಯೋಜನಗಳು:

ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸೂರ್ಯನ ಹಾನಿಕಾರಕ ಯುವಿ ಕಿರಣಗಳ ಪರಿಣಾಮವಾಗಿ ಉಂಟಾಗುವ ಕಪ್ಪು ಕಲೆಗಳನ್ನು ನಿರ್ಮೂಲನ ಮಾಡುತ್ತದೆ. ಮೊಡವೆಗಳನ್ನು ದೂರವಿಡಲು ಕೂಡ ಇದು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read