ಬಾಯಿ ಸ್ವಚ್ಚಮಾಡಲು ಬಳಸಿ ಈ ನೈಸರ್ಗಿಕ ಮೌತ್ ವಾಶ್

ಬಾಯಿಯಿಂದ ಆಹಾರಗಳು ಹೊಟ್ಟೆಗೆ ಸೇರುವುದರಿಂದ ಬಾಯಿ ಯಾವಾಗಲೂ ಸ್ವಚ್ಚವಾಗಿರಬೇಕು. ಬಾಯಿಯನ್ನು ಸ್ವಚ್ಚವಾಗಿಡದಿದ್ದರೆ ಅಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಹೊಟ್ಟೆಯನ್ನು ಸೇರಿ ಹಾನಿ ಉಂಟುಮಾಡುತ್ತದೆ. ಮತ್ತು ಬಾಯಿಯಲ್ಲಿ ವಾಸನೆ ಬರುತ್ತದೆ. ಹಾಗಾಗಿ ಬಾಯಿಯನ್ನು ಸ್ವಚ್ಚವಾಗಿಡಿ. ಅದಕ್ಕಾಗಿ ನೈಸರ್ಗಿಕವಾದ ಈ ಮೌತ್ ವಾಶ್ ಗಳನ್ನು ಬಳಸಿ.

*ಊಟವಾದ ಬಳಿಕ ಬಾಯಿಯನ್ನು ಉಪ್ಪು ನೀರಿನಿಂದ ತೊಳೆಯಿರಿ. ಇದು ಬಾಯಿಯಲ್ಲಿರುವ ಎಲ್ಲಾ ಕಲ್ಮಶಗಳನ್ನು, ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

*ಬಾಯಿಯನ್ನು ತೆಂಗಿನೆಣ್ಣೆಯಿಂದ ವಾಶ್ ಮಾಡಿ. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುವುದಲ್ಲದೇ ಹಲ್ಲು, ಒಸಡುಗಳು ಗಟ್ಟಿಯಾಗಿ ಹಲ್ಲು ಹೊಳೆಯುತ್ತದೆ.

*ಎಸೆನ್ಷಿಯಲ್ ಆಯಿಲ್ ಗಳಾದ ಲವಂಗ ಮತ್ತು ದಾಲ್ಚನ್ನಿ ಎಣ್ಣೆ ಮೌತ್ ವಾಶ್ ಮಾಡಲು ಬಳಸಬಹುದು. 1 ಕಪ್ ನೀರಿನಲ್ಲಿ 10 ಹನಿಗಳಷ್ಟು ಇವೆರಡು ಎಣ್ಣೆಗಳನ್ನು ಮಿಕ್ಸ್ ಮಾಡಿ ಬಾಯಿಯನ್ನು ವಾಶ್ ಮಾಡಿದರೆ ಬಾಯಿಯನ್ನು ಸೋಂಕು ರಹಿತಗೊಳಿಸುತ್ತದೆ.

* 1 ಗ್ಲಾಸ್ ಬೆಚ್ಚಗಿನ ನೀರಿಗೆ ಸ್ವಲ್ಪ ಬೇಕಿಂಗ್ ಪೌಡರ್ ಮಿಕ್ಸ್ ಮಾಡಿ ಅದರಿಂದ ಬಾಯಿಯನ್ನು ವಾಶ್ ಮಾಡಿದರೆ ಬಾಯಿ ಸ್ಚಚ್ಚವಾಗುವುದರ ಜೊತೆಗೆ ಹಲ್ಲುಗಳು ಬಿಳಿಯಾಗುತ್ತದೆ ಮತ್ತು ಕೆಟ್ಟ ಉಸಿರಾಟ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read