ಸಾಮಾನ್ಯ ಕೂದಲಿಗೆ ಬಳಸಿ ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕವಾದ ಈ ಹೇರ್ ಕಂಡೀಷನರ್

ಸಾಮಾನ್ಯ ಕೂದಲು ಹೊಂದಿರುವವರು ಕೂದಲುದುರುವ, ಕೂದಲು ಹೊಳಪು ಕಳೆದುಕೊಳ್ಳುವಂತಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಕೂದಲ ಆರೈಕೆಗೆ ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಸುವ ಬದಲು ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸಿದ ಈ ಹೇರ್ ಕಂಡೀಷನರ್ ಅನ್ನು ಬಳಸಿ.

1 ಚಮಚ ಜೇನುತುಪ್ಪ, 2 ಚಮಚ ಬಿಳಿ ವಿನೆಗರ್, 1 ಚಮಚ ನೆಲ್ಲಿಕಾಯಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲನ್ನು ಒದ್ದೆ ಮಾಡಿಕೊಂಡು ಈ ಪೇಸ್ಟ್ ನ್ನು ಹಚ್ಚಿ ನಿಧಾನವಾಗಿ 10 ನಿಮಿಷಗಳ ಕಾಲ ಮಸಾಜ್ ಮಾಡಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಬಳಿಸಿ.

1 ಚಮಚ ದಾಲ್ಚಿನ್ನಿ ಪುಡಿ, 1 ಚಮಚ ಹಸಿ ಹಾಲು , 1 ಚಮಚ ಜೇನುತುಪ್ಪ, ಮೂರನ್ನು ಮಿಕ್ಸ್ ಮಾಡಿ ಅದನ್ನು ಸ್ವಲ್ಪ ಬಿಸಿ ಮಾಡಿ ಕೂದಲನ್ನು ಒದ್ದೆ ಮಾಡಿಕೊಂಡು ಈ ಪೇಸ್ಟ್ ನ್ನು ಹಚ್ಚಿ ನಿಧಾನವಾಗಿ 10 ನಿಮಿಷಗಳ ಕಾಲ ಮಸಾಜ್ ಮಾಡಿ 5 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read