ಗಾಯದ ಕಲೆ ಸುಲಭವಾಗಿ ಮಾಯವಾಗಲು ಬಳಸಿ ಈ ಮನೆಮದ್ದು

ಗಾಯ ಮಾಗಿದ್ರೂ ಅದರ ಕಲೆ ಹಾಗೇ ಉಳಿದುಬಿಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಆಟದ ಹುಮ್ಮಸ್ಸು ಹೆಚ್ಚು, ಆಗ ಬಿದ್ದು ಪೆಟ್ಟು ಮಾಡಿಕೊಳ್ಳೋದು ಕೂಡ ಕಾಮನ್.‌ ಆಗ ಆದ ಗಾಯದ ಗುರುತು ಎಷ್ಟೋ ಬಾರಿ ಮಾಸದೇ ಉಳಿಯುತ್ತದೆ.

ಅಪಘಾತದಲ್ಲಿ ಗಾಯಗೊಂಡಿದ್ದರೆ ಆ ಕುರುಹುಗಳು ಕೂಡ ಹೋಗುವುದಿಲ್ಲ. ಆ ಕಲೆಯಿಂದಾಗಿ ಅಪಘಾತದ ಕಹಿ ನೆನಪು ಜೀವನ ಪೂರ್ತಿ ಕಾಡುತ್ತದೆ. ನಿಮ್ಮ ದೇಹದ ಮೇಲೂ ಇದೇ ರೀತಿಯ ಗುರುತುಗಳಿದ್ದರೆ ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಈ ಗುರುತುಗಳನ್ನು ತೊಡೆದುಹಾಕಬಹುದು.

ಅಲೋವೆರಾ ಜೆಲ್: ಅಲೋವೆರಾ ಅನೇಕ ಪ್ರಯೋಜನಗಳನ್ನು ಹೊಂದಿದೆ. ನಿಮ್ಮ ದೇಹದ ಮೇಲೆ ಗಾಯದ ಗುರುತು ಅಥವಾ ಕಲೆ ಇದ್ದರೆ ಅಲೋವೆರಾದ ಪಲ್ಪ್‌ ಅನ್ನು ಆ ಗಾಯದ ಮೇಲೆ ಹಚ್ಚಿ ಮಸಾಜ್‌ ಮಾಡಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ.

ಸೌತೆಕಾಯಿ: ಸೌತೆಕಾಯಿ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ತರಕಾರಿ. ಹೆಚ್ಚಿನ ಜನರು ಇದನ್ನು ಇಷ್ಟಪಡುತ್ತಾರೆ. ಸೌತೆಕಾಯಿಯಲ್ಲಿ ಸಾಕಷ್ಟು ನೀರಿನ ಅಂಶವಿದೆ. ಇದು ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಸೌತೆಕಾಯಿನ್ನು ರೌಂಡ್‌ ಆಗಿ ಕತ್ತರಿಸಿಕೊಂಡು ಅದನ್ನು ಗಾಯದ ಗುರುತಿನ ಮೇಲಿಟ್ಟು ನಿಧಾನವಾಗಿ ಉಜ್ಜಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಗುರುತು ಮಾಯವಾಗುತ್ತದೆ.

ತೆಂಗಿನ ಎಣ್ಣೆ: ಕಲೆಗಳನ್ನು ಹೋಗಲಾಡಿಸಲು ತೆಂಗಿನ ಎಣ್ಣೆ ಬಹಳ ಪ್ರಯೋಜನಕಾರಿಯಾಗಿದೆ. ಕಲೆಗಳ ಮೇಲೆ ಪ್ರತಿದಿನ ತೆಂಗಿನೆಣ್ಣೆ ಹಚ್ಚುತ್ತಾ ಬಂದರೆ ಕ್ರಮೇಣ ಅವುಗಳನ್ನು ಹೋಗಲಾಡಿಸಬಹುದು.

ವಿನೆಗರ್‌: ವಿನೆಗರ್‌ ಕೂಡ ಸಾಕಷ್ಟು ಆರೋಗ್ಯ ಸ್ನೇಹಿ ಪದಾರ್ಥವಾಗಿದೆ. ದೇಹದ ಮೇಲಾದ ಗಾಯದ ಗುರುತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮಗೇನಾದ್ರೂ ಪೆಟ್ಟಾಗಿ ಆ ಜಾಗದಲ್ಲಿ ಕಲೆಯಾಗಿದ್ದರೆ ಹತ್ತಿಯಲ್ಲಿ ನೀರು ಮತ್ತು ವಿನೆಗರ್ ಅನ್ನು ಮಿಶ್ರಣ ಮಾಡಿ ಅದನ್ನು ನಿಮ್ಮ ಗಾಯದ ಮೇಲೆ ಹಚ್ಚಿ. ಮಲಗುವ ಮುನ್ನ ನೀವು ಪ್ರತಿದಿನ ಇದನ್ನು ಮಾಡಬೇಕು. ಇದರಿಂದ ನೀವು ಖಂಡಿತವಾಗಿಯೂ ಪ್ರಯೋಜನಗಳನ್ನು ಪಡೆಯುತ್ತೀರಿ.

ನಿಂಬೆಹಣ್ಣು: ನಿಂಬೆಯಲ್ಲಿ ಬ್ಲೀಚಿಂಗ್ ಏಜೆಂಟ್ ಇದೆ. ಇದನ್ನು ಸೌಂದರ್ಯವರ್ಧಕದಲ್ಲಿಯೂ ಬಳಸಲಾಗುತ್ತದೆ. ನಿಮ್ಮ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿದ್ದರೆ ನಿಂಬೆ ರಸವನ್ನು ಹಚ್ಚಿ. ನಿಂಬೆಯು ತ್ವಚೆಯಿಂದ ಸತ್ತ ಜೀವಕೋಶಗಳನ್ನು ತೆಗೆದು ಹೊಸ ಚರ್ಮ ಬರಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read