ಮೊಡವೆ ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ ಗಳನ್ನು ಬಳಸಿ

ಸಾಮಾನ್ಯವಾಗಿ ಎಲ್ಲರ ಮುಖದಲ್ಲೂ ಮೊಡವೆಗಳು ಮೂಡುತ್ತವೆ. ಇದನ್ನು ನಿವಾರಿಸಿಕೊಳ್ಳದಿದ್ದರೆ ಇದರಿಂದ ಮುಖದಲ್ಲಿ ಕಲೆಗಳು ಮೂಡಬಹುದು. ಇದು ನಿಮ್ಮ ಅಂದವನ್ನು ಕೆಡಿಸಬಹುದು. ಈ ಮೊಡವೆಗಳನ್ನು ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ ಗಳನ್ನು ಬಳಸಿ.

*ಟೀ ಟ್ರೀ ಆಯಿಲ್ : ಇದರಲ್ಲಿ ಆಂಟಿ ಫಂಗಲ್ ಗುಣಗಳಿವೆ. ಇದು ಮೊಡವೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದನ್ನು ಮೊಡವೆಗಳ ಮೇಲೆ ಹಚ್ಚಿದರೆ ಮೊಡವೆಗಳು ಬಹಳ ಬೇಗನೆ ಮಾಯವಾಗುತ್ತದೆ.

*ಲ್ಯಾವೆಂಡರ್ ಆಯಿಲ್ : ಇದು ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮವನ್ನು ಪೋಷಿಸಲು ಸಹಕಾರಿಯಾಗಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಒಣ ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಮೊಡವೆಗಳ ಜೊತೆಗೆ ಮೊಡವೆಗಳಿಂದಾದ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read