ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಬಳಸಿ ‘ಪುದೀನಾ’

ಪುದೀನಾ ಎಲೆಗಳನ್ನು ಅಡುಗೆ ಮನೆಯಲ್ಲಿ ಬಳಸುವ ವೈವಿಧ್ಯಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದನ್ನು ಆಯುರ್ವೇದದಲ್ಲೂ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ ಗಳಿದ್ದು ಸೌಂದರ್ಯ ವರ್ಧಕವಾಗಿಯೂ ಪುದೀನಾ ಪ್ರಯೋಜನ ಕೊಡುತ್ತದೆ.

ಬ್ರಶ್ ಮಾಡಿದ ಬಳಿಕ ನಾಲ್ಕು ಎಲೆ ಪುದೀನಾವನ್ನು ಬಾಯಿಯಲ್ಲಿ ಹಾಕಿ ಜಗಿಯುವುದರಿಂದ ದಿನವಿಡೀ ಬಾಯಿ ದುರ್ವಾಸನೆ ಬೀರುವುದು ತಪ್ಪುತ್ತದೆ.

ಕುಡಿಯಲು ನೀರು ಕುದಿಸಿ ಕೆಳಗಿಳಿಸಿದ ಬಳಿಕ ಮೂರು ಎಲೆ ಪುದೀನಾ ಅದರಲ್ಲಿ ಹಾಕಿ. ದಿನವಿಡೀ ಅದೇ ನೀರನ್ನು ಸೇವಿಸಿ. ಇದು ದೇಹವನ್ನು ತಂಪಾಗಿಟ್ಟು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಶೀತ, ಕೆಮ್ಮು, ಜ್ವರದಂತಹ ಸಣ್ಣ ಸಮಸ್ಯೆಗಳಿಗೆ ಪುದೀನಾಗೆ ಶುಂಠಿ ಸೇರಿಸಿ ಕಷಾಯ ತಯಾರಿಸಿ ಕುಡಿಯಿರಿ. ಒಂದೇ ದಿನದಲ್ಲಿ ನಿಮ್ಮ ಶೀತ ಮಾಯವಾಗುತ್ತದೆ.

ಪುದೀನಾ ರಸಕ್ಕೆ ನಿಂಬೆರಸ ಸೇರಿಸಿ ಕುಡಿದರೆ ಒಣಕೆಮ್ಮು ಸಮಸ್ಯೆಯೂ ದೂರವಾಗುತ್ತದೆ. ಇದರ ರಸವನ್ನು ತೆಗೆದು ಮುಖಕ್ಕೆ ಹಚ್ಚುವುದರಿಂದ ಮೊಡವೆಯ ಕಲೆಗಳೂ ದೂರವಾಗುತ್ತವೆ.

ಅಲರ್ಜಿ ಸಮಸ್ಯೆ ಇರುವವರು ಪುದೀನಾ ಎಲೆಗಳನ್ನು ಟೀ ರೂಪದಲ್ಲಿ ಕುಡಿದರೆ ರಕ್ತ ಸಂಚಲನೆ ಸರಾಗವಾಗಿ ನಡೆದು ದೇಹದ ವಿಷಕಾರಿ ಅಂಶ ಹೊರಹಾಕಲ್ಪಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read