ಗಮನಿಸಿ: ಕಾವೇರಿ ತೀರ್ಥೋದ್ಭವ ವೇಳೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

ಮಡಿಕೇರಿಯ ತಲಕಾವೇರಿಯಲ್ಲಿ ಅಕ್ಟೋಬರ್‌ 17ರಂದು ಬೆಳಗ್ಗೆ 7.40ಕ್ಕೆ ನಡೆಯಲಿರುವ ಶ್ರೀಕಾವೇರಿ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವದಲ್ಲಿ ಕಲ್ಯಾಣಿ ಮತ್ತು ಪವಿತ್ರ ಬ್ರಹ್ಮಕುಂಡಿಕೆ ಬಳಿ ಪ್ಲಾಸ್ಟಿಕ್‌ ಬಾಟಲಿ, ಬಿಂದಿಗೆ ಮತ್ತು ಕ್ಯಾನ್‌ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

ʼತೀರ್ಥೋದ್ಭವವಾಯಿತುʼ ಎಂದು ಅರ್ಚಕರು ಘೋಷಿಸುತ್ತಿದ್ದಂತೆ ಸಾಮಾನ್ಯವಾಗಿ ಕಲ್ಯಾಣಿಗೆ ಪ್ಲಾಸ್ಟಿಕ್‌ ಬಿಂದಿಗೆ, ಕ್ಯಾನ್‌, ಬಾಟಲಿಗಳನ್ನು ಹಿಡಿದು ಧುಮುಕುವ ಭಕ್ತರು ಬ್ರಹ್ಮಕುಂಡಿಕೆ ಬಳಿ ತೀರ್ಥವನ್ನು ಅದರಲ್ಲೇ ತುಂಬಿಸಿಕೊಳ್ಳುತ್ತಾರೆ. ಹಾಗಾಗಿ ತೀರ್ಥ ತುಂಬಿಸಿಕೊಳ್ಳಲು ಪ್ಲಾಸ್ಟಿಕ್‌ ಪರಿಕರಗಳನ್ನು ನಿಷೇಧಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read