ಗಣೇಶ ಚತುರ್ಥಿಯಂದು ಮಾವಿನ ಎಲೆಗಳನ್ನು ಈ ರೀತಿ ಬಳಸಿ; ಗಜಮುಖನ ಕೃಪೆಯಿಂದ ಆಗಬಹುದು ಲಕ್ಷಾಧಿಪತಿ….!

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣಪತಿಯು ಭಕ್ತರ ಮನೆಯಲ್ಲಿ ಕುಳಿತಿರುತ್ತಾನೆ. ಈ ಬಾರಿ ಗಣೇಶ ಚತುರ್ಥಿ ಆಗಸ್ಟ್ 31 ರಂದು ಬಂದಿದೆ. 10 ದಿನಗಳ ಈ ಹಬ್ಬವು ಗಣೇಶ ವಿಸರ್ಜನೆಯೊಂದಿಗೆ  ಕೊನೆಗೊಳ್ಳುತ್ತದೆ.

ಈ 10 ದಿನಗಳಲ್ಲಿ ಗಣಪತಿಗೆ ಸಾಕಷ್ಟು ಪೂಜೆಗಳನ್ನು ಮಾಡಲಾಗುತ್ತದೆ. ವಿಘ್ನನಿವಾರಕನಿಗೆ ಇಷ್ಟವಾದ ವಸ್ತುಗಳನ್ನು ಭಕ್ತರು ಅರ್ಪಿಸುತ್ತಾರೆ. ಗಣೇಶ ಚತುರ್ಥಿಯಂದು ಮನೆಯಲ್ಲಿ ಬಪ್ಪನನ್ನು ಪ್ರತಿಷ್ಠಾಪಿಸಿ ಭಕ್ತರ ದುಃಖಗಳನ್ನು ದೂರ ಮಾಡುವಂತೆ ಪ್ರಾರ್ಥಿಸುವುದು ವಾಡಿಕೆ.

ಧರ್ಮಗ್ರಂಥಗಳ ಪ್ರಕಾರ, ಈ 10 ದಿನಗಳಲ್ಲಿ ಜನರಿಗೆ ಆಶೀರ್ವಾದ ನೀಡಲೆಂದೇ ಗಜಮುಖ ಭೂಮಿಗೆ ಬರುತ್ತಾನೆ. ವಿಸರ್ಜನೆಯ ಬಳಿಕ ತನ್ನ ಲೋಕಕ್ಕೆ ಹಿಂದಿರುಗುತ್ತಾನೆ. ಈ ದಿನದಂದು ಗಣೇಶನಿಗೆ ಇಷ್ಟವಾದ ವಸ್ತುಗಳಿಂದ ಅಲಂಕರಿಸಿದರೆ ವಿಶೇಷ ಫಲಿತಾಂಶ ದೊರೆಯುತ್ತದೆ ಎಂಬ ನಂಬಿಕೆ ಇದೆ. ಗಣಪತಿಯು ಪ್ರಸನ್ನನಾಗಿ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.

ಗಣೇಶನಿಗೆ ಕೆಂಪು ಬಣ್ಣದ ಹೂವುಗಳೆಂದರೆ ತುಂಬಾ ಇಷ್ಟ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದಾಸವಾಳದ ಹೂವುಗಳು ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಗಣೇಶನ ವಿಗ್ರಹವನ್ನು ದಾಸವಾಳದ ಹೂವಿನಿಂದ ಅಲಂಕರಿಸಿದರೆ ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಹೊಸ ಅವಕಾಶಗಳೂ ಹುಟ್ಟಿಕೊಳ್ಳುತ್ತವೆ.

ಮಾವಿನ ಎಲೆಗಳ ವಿಶೇಷ ಮಹತ್ವವನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮಾವಿನ ಎಲೆಗಳನ್ನು ಮನೆಯಲ್ಲಿ ನೇತು ಹಾಕುವುದರಿಂದ ಧನಾತ್ಮಕ ಶಕ್ತಿ ಮನೆಗೆ ಪ್ರವೇಶಿಸುತ್ತದೆ. ಹೊರಗಿನಿಂದ ಬರುವ ಗಾಳಿಯು ಮಾವಿನ ಎಲೆಗಳನ್ನು ಸ್ಪರ್ಶಿಸುವಾಗ, ಆಗ ಅವು ಧನಾತ್ಮಕ ಶಕ್ತಿಯನ್ನು ತರುತ್ತವೆ ಎಂದು ಹೇಳಲಾಗುತ್ತದೆ. ಗಣೇಶನ ವಿಗ್ರಹದ ಸುತ್ತಲೂ ಮಾವಿನ ಎಲೆಗಳನ್ನು ಇಡುವುದರಿಂದ ಆದಾಯವು ಕಡಿಮೆಯಾಗುವುದಿಲ್ಲವಂತೆ. ಅಲ್ಲದೆ, ಸಂಪತ್ತು ಮತ್ತು ಆಹಾರ  ಮನೆಯಲ್ಲಿ ಉಳಿಯುತ್ತದೆ.

ಬೇವಿನ ಎಲೆಗಳನ್ನು ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶನಿದೇವನ ಕೋಪವನ್ನು ಕಡಿಮೆ ಮಾಡಲು ಬೇವಿನ ಮರದಿಂದ ಹವನ ಮಾಡಬೇಕೆಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಶನಿದೇವ ಪ್ರಸನ್ನನಾಗಿ ವಿಶೇಷ ಆಶೀರ್ವಾದವನ್ನು ನೀಡುತ್ತಾನಂತೆ. ಬೇವಿನ ಎಲೆಗಳನ್ನು ಗಣೇಶ ಹಬ್ಬದ ಸಮಯದಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ನಾಶವಾಗುತ್ತದೆ. ಕುಟುಂಬದ ಸದಸ್ಯರ ನಡುವೆ ಪರಸ್ಪರ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read