ಉತ್ತಮ ಆರೋಗ್ಯಕ್ಕೆ ಬಳಸಿ ʼಮೆಂತ್ಯʼ

ನೆನೆ ಹಾಕಿದ ಮೆಂತ್ಯವನ್ನು ನುಣ್ಣಗೆ ರುಬ್ಬಿ ಕುದಿಯುವ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವಾಗ ಹಚ್ಚಿ, ಬೆಳಿಗ್ಗೆ ಎದ್ದೊಡನೆ ಮುಖ ತೊಳೆದುಕೊಳ್ಳಬೇಕು. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ.

ಬೆಳಿಗ್ಗೆ ಎದ್ದೊಡನೆ ಮೆಂತ್ಯದ ಸೇವನೆ ಮಾಡುವುದರಿಂದ ಹೆಚ್ಚುವರಿ ಕ್ಯಾಲೊರಿ ಕಳೆದುಕೊಳ್ಳಬಹುದು.

ಮೆಂತ್ಯ, ಜೀರಿಗೆ, ಬೆಳ್ಳುಳ್ಳಿಯನ್ನು ಒಗ್ಗರಣೆಗೆ ಹಾಕಿ ಅನ್ನದೊಂದಿಗೆ ಕಲಸಿ ತಿಂದರೆ ಒಳ್ಳೆಯದು.

ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ನೆರೆ ಕೂದಲಾಗುವುದು ನಿಲ್ಲುತ್ತದೆ.

ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಲ್ಯದೊಂದಿಗೆ ತಿನ್ನುವುದರಿಂದ ಶಾರೀರಿಕ ನೋವು ಕಡಿಮೆಯಾಗುತ್ತದೆ.

ಒಂದು ಟೀ ಚಮಚ ಮೆಂತ್ಯದ ಪುಡಿಯನ್ನು ಗಟ್ಟಿ ಮೊಸರಿನಲ್ಲಿ ಕಲಸಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ಆಮಶಂಕೆ ಗುಣವಾಗುತ್ತದೆ.

ಮೆಂತ್ಯ, ದೊಡ್ಡಪತ್ರೆ, ಹಾಗಲಕಾಯಿ, ಅರಿಶಿಣ, ಸೀಬೆ ಚಿಗುರು ಕೊತ್ತಂಬರಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮೊಸರಿನಲ್ಲಿ ನುಣ್ಣಗೆ ಅರೆದು ಮೈಗೆ ಹಚ್ಚಿಕೊಳ್ಳಬೇಕು. ಇದರಿಂದ ತದ್ದು, ಪಿತ್ತದ ಗಂಧೆಗಳು ದೂರವಾಗುವುದು.

ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಚಮಚ ಹಸಿಶುಂಠಿ, ಜೇನುತುಪ್ಪ ಬೆರೆಸಿ ಕುಡಿದರೆ ಕಫ ಕರಗುತ್ತದೆ.

ಹುರಿದ ಮೆಂತ್ಯದಿಂದ ಗಂಜಿ ತಯಾರಿಸಿ ಹಾಲು, ಸಕ್ಕರೆ ಬೆರೆಸಿ ಸೇವಿಸುವುದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read