ವಿಮಾನ ನಿಲ್ದಾಣದಲ್ಲಿ ಬೆತ್ತಲೆ ಮಹಿಳೆಯ ರಂಪಾಟ ; ಬಂಧಿಸಲು ಸಿಬ್ಬಂದಿ ಹೆಣಗಾಟ | Watch

ಟೆಕ್ಸಾಸ್‌ನ ಡಲ್ಲಾಸ್-ಫೋರ್ಟ್ ವರ್ತ್ ವಿಮಾನ ನಿಲ್ದಾಣದ ಟರ್ಮಿನಲ್ ಡಿ ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬೆತ್ತಲೆ ಮಹಿಳೆಯೊಬ್ಬಳು ವಿಮಾನ ನಿಲ್ದಾಣದೊಳಗೆ ಓಡಾಡಿಕೊಂಡು ‘ನಾನು ಎಲ್ಲಾ ಭಾಷೆಗಳನ್ನು ಮಾತನಾಡುತ್ತೇನೆ’ ಎಂದು ವಿಚಿತ್ರವಾಗಿ ಕೂಗಾಡುತ್ತಿದ್ದಳು.

ಅಲ್ಲದೆ, ಪಾನೀಯವನ್ನು ಎಸೆದು, ಮಾನಿಟರ್ ಮತ್ತು ಗೇಟ್ ಡಿ4 ರ ಬೋರ್ಡಿಂಗ್ ಬಾಗಿಲನ್ನು ಹಾನಿಗೊಳಿಸಿದ್ದಾಳೆ. ಪುರುಷ ಮತ್ತು ಮಹಿಳಾ ಸಿಬ್ಬಂದಿ ಸೇರಿದಂತೆ ಭದ್ರತಾ ಸಿಬ್ಬಂದಿ ಆಕೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ.

ಮಾರ್ಚ್ 24 ರ ಸುಮಾರಿಗೆ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದು, ಪ್ರಯಾಣಿಕರಲ್ಲಿ ಆತಂಕವನ್ನು ಮೂಡಿಸಿದೆ. ಅಧಿಕಾರಿಗಳು ಈ ಗಲಭೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read