ಒಂದೇ ರೀತಿಯ 20 ಲಾಟರಿ ಟಿಕೆಟ್ ಖರೀದಿಸಿ ಲಕ್ಷ ಲಕ್ಷ ಗಳಿಸಿದ್ದೇಗೆ ಗೊತ್ತಾ ? ಇಲ್ಲಿದೆ ಆತನ ವಿವರ

ಒಂದೇ ರೀತಿಯ 20 ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ ವ್ಯಕ್ತಿಯೊಬ್ಬರಿಗೆ 81 ಲಕ್ಷ ಬಹುಮಾನ ಮೊತ್ತ ಬಂದಿದೆ.

$100,000 (81,90,000 ರೂ.) ಮೊತ್ತವನ್ನು ಬಹುಮಾನವಾಗಿ ಗೆಲ್ಲುವ ಮೂಲಕ ಅಮೇರಿಕದ ಲಾಟರಿ ಆಟಗಾರ ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದಾರೆ.

ವರ್ಜೀನಿಯಾದ ಅಲೆಕ್ಸಾಂಡ್ರಿಯಾದ ಫೆಕ್ರು ಹಿರ್ಪೋ ಮಾರ್ಚ್ 8 ರಂದು ಪಿಕ್ 4 ಡ್ರಾಯಿಂಗ್‌ಗಾಗಿ 20 ಟಿಕೆಟ್‌ಗಳನ್ನು 2-5-2-7 ರ ಅದೇ ನಾಲ್ಕು-ಅಂಕಿಯ ಸಂಯೋಜನೆಯೊಂದಿಗೆ ಖರೀದಿಸಿದರು. 20 ಟಿಕೆಟ್‌ಗಳನ್ನು ಖರೀದಿಸಿದ್ದ ಹಿರ್ಪೋ $100,000 ಗೆದ್ದರು. ಏಕೆಂದರೆ ಪಿಕ್ 4 ಆಟದ ಉನ್ನತ ಬಹುಮಾನ $5,000 ಆಗಿತ್ತು.

ಹಿರ್ಪೋ ಅವರು ಆರ್ಲಿಂಗ್ಟನ್‌ನಲ್ಲಿರುವ 4060 ಸೌತ್ ಫೋರ್ ಮೈಲ್ ರನ್ ಡ್ರೈವ್‌ನಲ್ಲಿರುವ ಫೋರ್ ಮೈಲ್ ರನ್ ಶೆಲ್‌ನಲ್ಲಿ ತಮ್ಮ ಟಿಕೆಟ್‌ಗಳನ್ನು ಖರೀದಿಸಿದ್ದರು. ಲಾಟರಿ ಗೆದ್ದು ಬಂದಿರುವ ಹಣದಿಂದ ಏನು ಮಾಡಬೇಕೆಂಬ ತಕ್ಷಣದ ಯೋಜನೆಯೂ ತಮಗಿಲ್ಲ ಎಂದು ಅಲೆಕ್ಸಾಂಡ್ರಿಯಾದ ಫೆಕ್ರು ಹಿರ್ಪೋ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read