ವಾಷಿಂಗ್ಟನ್: ಚೀನಾ ಮತ್ತು ಅಮೆರಿಕ ನಡುವೆ ಸುಂಕ ಸಮರ ತಾರಕಕ್ಕೇರಿದೆ. ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಚೀನಾದ ಸರಕು ಮೇಲೆ ಭಾರಿ ಸುಂಕ ವಿಧಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಸರಕುಗಳ ಮೇಲೆ ಶೇಕಡ 104 ರಷ್ಟು ಸುಂಕ ವಿಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಟ್ರಂಪ್ ಹೆಚ್ಚುವರಿಯಾಗಿ ಶೇ. 34ರಷ್ಟು ಸುಂಕ ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕ ಮೇಲೆ ಶೇಕಡ 34 ರಷ್ಟು ಸುಂಕ ವಿಧಿಸಿತ್ತು. ಇದೀಗ ಚೀನಾದ ಮೇಲೆ ಅಮೆರಿಕ ಶೇ. 104 ರಷ್ಟು ಸುಂಕ ವಿಧಿಸಿದೆ.
ಚೀನಾದ ಸರಕುಗಳ ಮೇಲೆ ಅಮೆರಿಕ ತಕ್ಷಣದಿಂದಲೇ 104% ಸುಂಕ ವಿಧಿಸಿದೆ ಎಂದು ಶ್ವೇತಭವನ ದೃಢಪಡಿಸಿದೆ. ವ್ಯಾಪಾರ ಯುದ್ಧದ ನಾಟಕೀಯ ಉಲ್ಬಣದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 8 ರ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಎಲ್ಲಾ ಚೀನೀ ಸರಕುಗಳ ಮೇಲೆ ಅಮೆರಿಕವು 104% ವ್ಯಾಪಕ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ.