ಪ್ರೇಮ ವೈಫಲ್ಯದಿಂದ ದೂರವಾಗಿದ್ದ ಜೋಡಿಗೆ 43 ವರ್ಷಗಳ ಬಳಿಕ ಕಂಕಣ ಬಲ

ನ್ಯೂಯಾರ್ಕ್​: ಪ್ರೀತಿಸಿದವರೇ ಬಾಳ ಸಂಗಾತಿಯಾಗುವುದು ಹಲವರಿಗೆ ಸುಲಭದ ಮಾತಾಗಿರುವುದಿಲ್ಲ. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ ಪ್ರೀತಿಸಿದರೂ ಮದುವೆಯಾಗಲು ಸಾಧ್ಯವಾಗದ ಪ್ರೇಮಿಗಳು 43 ವರ್ಷಗಳ ಬಳಿಕ ಒಟ್ಟಿಗೇ ಸಿಕ್ಕು ಪುನಃ ಮದುವೆಯಾಗಿರುವ ಘಟನೆ ನಡೆದಿದೆ.

ಇದು ನಡೆದಿರುವುದು ಅಮೆರಿಕದಲ್ಲಿ. ಈ ಜೋಡಿಯ ಕಥೆಯೀಗ ವೈರಲ್​ ಆಗಿದೆ. ಜೀನ್ ವಾಟ್ಸ್ ಅವರು 1971 ರಲ್ಲಿ ತನ್ನ ಕಾಲೇಜು ದಿನಗಳಲ್ಲಿ ಸ್ಟೀಫನ್ ವಾಟ್ಸ್‌ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಬೇಕು ಎಂದುಕೊಂಡಿದ್ದರು. ಆದರೆ ಪಾಲಕರ ಅನುಮತಿ ಸಿಗದ ಕಾರಣ ಇಬ್ಬರೂ ಬೇರೆ ಬೇರೆಯಾಗಬೇಕಾಯಿತು.

ನಂತರ ಇಬ್ಬರಿಗೂ ಬೇರೆ ಬೇರೆ ಮದುವೆಯಾಯಿತು. ಆದರೆ ಸ್ಟೀಫನ್ ವಾಟ್ಸ್‌ ಅವರು ಪತಿಗೆ ವಿಚ್ಛೇದನ ಕೊಟ್ಟಿದ್ದರೆ, ಅತ್ತ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಜೀನ್​ ಅವರೂ ಪತ್ನಿಗೆ ಡಿವೋರ್ಸ್​ ಕೊಟ್ಟಿದ್ದರು.

ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು ನರ್ಸಿಂಗ್​ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ನರ್ಸಿಂಗ್​ ಹೋಂಗೆ ಅಚಾನಕ್​ ಆಗಿ ಸ್ಟೀಫನ್​ ಕೂಡ ಭೇಟಿ ಕೊಟ್ಟಿದ್ದಾರೆ.

ನಂತರ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ಈ ಪ್ರೇಮಿಗಳು ಪುನಃ ಒಂದಾಗಿ ಈಗ ಮದುವೆಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read