ಪೊಲೀಸ್ ಅಧಿಕಾರಿಯೊಬ್ಬ ಯುವತಿಯೊಬ್ಬಳನ್ನು ಚುಂಬಿಸಿ ಕಾರಿನ ಹಿಂಭಾಗದಲ್ಲಿ ಕುಳ್ಳಿರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಅಮೆರಿಕದ ಪ್ರಿನ್ಸ್ ಜಾರ್ಜ್‌ನ ಕೌಂಟಿ ಪೊಲೀಸ್ ಅಧಿಕಾರಿಯನ್ನು ಫ್ರಾನ್ಸೆಸ್ಕೊ ಮಾರ್ಲೆಟ್ ಎಂದು ಗುರುತಿಸಲಾಗಿದೆ.
ಉದ್ಯಾನವನದ ಬಳಿ ತನ್ನ ವಾಹನದ ಪಕ್ಕದಲ್ಲಿ ಯುವತಿಯನ್ನು ಅಪ್ಪಿಕೊಂಡು ಮುತ್ತಿಡುತ್ತಿರುವ ವಿಡಿಯೋ ಹೊರಬಿದ್ದಿದೆ. ಯುವತಿ ನಂತರ ಅಧಿಕಾರಿಯ ಕೈಯನ್ನು ಹಿಡಿದುಕೊಂಡು, ವಾಹನದ ಹಿಂಭಾಗಕ್ಕೆ ಬರುತ್ತಾಳೆ. ಅವನು ಅವಳನ್ನು ಹಿಂಬಾಲಿಸಿ, ಕಾರಿನಲ್ಲಿ ಕುಳ್ಳಿರಿಸಿದ್ದಾನೆ.
ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯೊಬ್ಬರು ಬಾಲ್ಟಿಮೋರ್ ಬ್ಯಾನರ್‌ಗೆ ಪೊಲೀಸ್ ಮತ್ತು ಯುವತಿ ಪ್ರತ್ಯೇಕವಾಗಿ ಉದ್ಯಾನವನದಿಂದ ಹೊರಡುವ ಮೊದಲು ಸುಮಾರು 40 ನಿಮಿಷಗಳ ಕಾಲ ಕ್ರೂಸರ್‌ನಲ್ಲಿಯೇ ಇದ್ದರು ಎಂಬುದಾಗಿ ಹೇಳಿದ್ರು. ಆಕ್ಸನ್ ಹಿಲ್ ಪ್ರೌಢಶಾಲೆಯ ಪಕ್ಕದಲ್ಲಿರುವ ಕಾರ್ಸನ್ ಪಾರ್ಕ್‌ನಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ಪೊಲೀಸ್ ಅಧಿಕಾರಿ ಮಾರ್ಲೆಟ್ ಮತ್ತು ವಿಡಿಯೋದಲ್ಲಿರುವ ಯುವತಿಯ ನಡುವಿನ ಸಂಬಂಧ ಏನು ಎಂಬುದು ಸ್ಪಷ್ಟವಾಗಿಲ್ಲ. ಟಿಕ್‌ಟಾಕ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ ವೈರಲ್ ಆದ ನಂತರ, ಮಾರ್ಲೆಟ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
https://twitter.com/CureBore/status/1699098990292209980?ref_src=twsrc%5Etfw%7Ctwcamp%5Etweetembed%7Ctwterm%5E1699098990292209980%7Ctwgr%5E5b2c240f12bd116e8e0f13027331e49ad380655b%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fus-cop-caught-on-video-kissing-woman-and-climbing-into-police-car-suspended-4366949