ತರಬೇತಿ ವೇಳೆಯಲ್ಲೇ ಎರಡು ಸೇನಾ ಹೆಲಿಕಾಪ್ಟರ್ ಪತನ

ಅಮೆರಿಕದ ಅಲಾಸ್ಕಾದಲ್ಲಿ ತರಬೇತಿ ಹಾರಾಟದ ವೇಳೆ 2 ಸೇನಾ ಹೆಲಿಕಾಪ್ಟರ್‌ಗಳು ಪತನಗೊಂಡಿವೆ. ತರಬೇತಿ ಹಾರಾಟದಿಂದ ವಾಪಸಾಗುತ್ತಿದ್ದಾಗ ಅಲಾಸ್ಕಾದಲ್ಲಿ ಎರಡು ಯುಎಸ್ ಸೇನಾ ಹೆಲಿಕಾಪ್ಟರ್‌ಗಳು ಪತನಗೊಂಡಿವೆ. ಈ ವರ್ಷ ರಾಜ್ಯದಲ್ಲಿ ಸೇನಾ ಹೆಲಿಕಾಪ್ಟರ್‌ಗಳು ಒಳಗೊಂಡ ಎರಡನೇ ಅಪಘಾತ ಇದಾಗಿದೆ.

ಯುಎಸ್ ಆರ್ಮಿ ಅಲಾಸ್ಕಾದ ಹೇಳಿಕೆಯ ಪ್ರಕಾರ, ಅಲಾಸ್ಕಾದ ಹೀಲಿ ಬಳಿಯ ಕ್ರ್ಯಾಶ್ ಸೈಟ್‌ ನಲ್ಲಿ ಘಟನೆ ನಡೆದಿದೆ. ವಿಮಾನದಲ್ಲಿ ಎಷ್ಟು ಜನರು ಇದ್ದರು ಎಂಬುದು ಸೇರಿ ಹೆಚ್ಚಿನ ವಿವರ ಲಭ್ಯವಾಗಿಲ್ಲ.

AH-64 ಅಪಾಚೆ ಹೆಲಿಕಾಪ್ಟರ್‌ ಗಳು ಫೇರ್‌ ಬ್ಯಾಂಕ್ಸ್‌ ನ ಸಮೀಪದಲ್ಲಿರುವ ಫೋರ್ಟ್ ವೈನ್‌ ರೈಟ್‌ ನಿಂದ ಬಂದವು. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿವರಗಳು ಲಭ್ಯವಾದ ನಂತರ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಲಿಯು ಡೆನಾಲಿ ನ್ಯಾಷನಲ್ ಪಾರ್ಕ್ ಮತ್ತು ಪ್ರಿಸರ್ವ್‌ನ ಉತ್ತರಕ್ಕೆ ಸುಮಾರು 10 ಮೈಲಿ ದೂರದಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read