ಕಾರೊಂದು ಜನನಿಬಿಡ ಪ್ರದೇಶದಲ್ಲಿ ಹೊತ್ತಿ ಉರಿದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಶಾರ್ಟ್ ಸಕ್ಯೂಟ್ ಕಾರಣಕ್ಕೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ.
ಜೈಪುರದ ಸೊಡಾಲ ತರಕಾರಿ ಮಂಡಿ ರಸ್ತೆಯಲ್ಲಿ ಈ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಜಿತೇಂದ್ರ ಎಂಬವರು ಕಾರು ಚಾಲನೆ ಮಾಡಿಕೊಂಡು ಬರುವಾಗ ಒಳಗೆ ಹೊಗೆ ಆವರಿಸಿಕೊಂಡಿತಲ್ಲದೇ ಸುಟ್ಟ ವಾಸನೆ ಕೂಡಾ ಬಂದಿದೆ.
ಇದರಿಂದ ಆತಂಕಗೊಂಡ ಅವರು ತಕ್ಷಣವೇ ಕಾರಿನಿಂದ ಹೊರ ಜಿಗಿದಿದ್ದು, ಆದರೆ ಕಾರಿನ ಹ್ಯಾಂಡ್ ಬ್ರೇಕ್ ಹಾಕದ ಕಾರಣ ಚಾಲಕನಿಲ್ಲದೆ ಹೊತ್ತಿ ಉರಿಯುತ್ತಿದ್ದ ಕಾರು ಇಳಿಜಾರಾದ ರಸ್ತೆಯಲ್ಲಿ ಸಾಗಿದೆ.
ಇದರಿಂದ ಸುತ್ತಮುತ್ತಲ ಜನ ಭಯಭೀತರಾಗಿದ್ದು, ಕೊನೆಗೂ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದು ನಿಂತುಕೊಂಡಿದೆ. ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/iamnarendranath/status/1845137546965361117?ref_src=twsrc%5Etfw%7Ctwcamp%5Etweetembed%7Ctwterm%5E1845137546965361117%7Ctwgr%5E92670144d631cf8ca8f11c7651c452a24bfab29e%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fburningcarinjaipurdriverlesscarinflamesspeedsthroughelevatedroadinsodalasabzimandiareasparkspanicwatchvideo-newsid-n634795373