ಮೂತ್ರ ನೊರೆಯಂತೆ ಬರ್ತಿದ್ದರೆ ನಿರ್ಲಕ್ಷ್ಯ ಬೇಡ

ನಮ್ಮ ಆರೋಗ್ಯದಲ್ಲಾಗುವ ಏರುಪೇರುಗಳನ್ನು ಮೂತ್ರದಿಂದ ಪತ್ತೆ ಮಾಡಬಹುದು. ಮೂತ್ರದ ಬಣ್ಣ ಬದಲಾದರೆ, ಮೂತ್ರದಿಂದ ಕೆಟ್ಟ ವಾಸನೆ ಬರ್ತಿದ್ದರೆ ಅಥವಾ ಮೂತ್ರ ನೊರೆ ರೂಪದಲ್ಲಿ ಬರ್ತಿದ್ದರೆ ನೀವು ನಿರ್ಲಕ್ಷ್ಯ ಮಾಡಬಾರದು. ಕೋಲ್ಡ್ ಡ್ರಿಂಕ್ಸ್‌ ಮುಚ್ಚಳ ತೆರೆದಾಗ ಬರುವಂತಹ ನೊರೆ ಮೂತ್ರದಲ್ಲಿ ಬರುತ್ತದೆ. ಇದು ನಿಮ್ಮ ಮೂತ್ರಕೋಶ ಹಾಳಾಗ್ತಿದೆ ಎನ್ನುವ ಸಂಕೇತವಾಗಿದೆ. ಇದಲ್ಲದೆ ನಿಮ್ಮ ದೇಹದ ಕೆಲ ಸಮಸ್ಯೆಗಳನ್ನು ಇದು ಸೂಚಿಸುತ್ತದೆ.

ಮೂತ್ರಪಿಂಡಗಳು ಹಾನಿಗೊಳಗಾಗಲು ಪ್ರಾರಂಭಿಸಿದಾಗ ಮತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಮೂತ್ರದಲ್ಲಿ ಪ್ರೋಟೀನ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮ್ಯಾಕ್ರೋನ್ಯೂಟ್ರಿಯಂಟ್ ಮೂತ್ರಪಿಂಡದ ದುರ್ಬಲ ಫಿಲ್ಟರ್ ಮೂಲಕ ಹಾದುಹೋಗುತ್ತದೆ, ಇದನ್ನು ಅಲ್ಬುಮಿನೂರಿಯಾ ಎಂದೂ ಕರೆಯುತ್ತಾರೆ. ಇದರ ಹೊರತಾಗಿ ನಿರ್ಜಲೀಕರಣ, ಮೂತ್ರಪಿಂಡದ ಕಾಯಿಲೆ, ಮಧುಮೇಹ ಎಲ್ಲವೂ ಕಾರಣವಾಗಿರಬಹುದು.

ಮೂತ್ರದಲ್ಲಿ ನೊರೆ ಜೊತೆಗೆ ಹಸಿವಿನ ನಷ್ಟ, ತಲೆ ನೋವು, ತೂಕ ಇಳಿಕೆ, ವಾಕರಿಕೆಯಂತ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಇದಲ್ಲದೆ ವಿಪರೀತ ಸುಸ್ತು, ನಿದ್ರೆ ಮಾಡಲು ಸಮಸ್ಯೆ, ಪದೇ ಪದೇ ಬಾಯಾರಿಕೆ, ಪಾದಗಳಲ್ಲಿ ಊತದ ಲಕ್ಷಣ ಕೂಡ ಅಪಾಯಕಾರಿಯಾಗಿದೆ.

ಮೂತ್ರದಲ್ಲಿ ನೊರೆ ಕಾಣಿಸಿಕೊಂಡರೆ ಡಯಟ್‌ ನಲ್ಲಿ ಮೊಟ್ಟೆ, ಮೀನು, ಡ್ರೈ ಫ್ರೂಟ್ಸ್‌, ಹಸಿರು ತರಕಾರಿ, ಹಣ್ಣು, ಹಾಲು ಮತ್ತು ಮೊಸರು, ಚೀಸ್ ಸೇವನೆ ಮಾಡಿ. ಎಣ್ಣೆಯುಕ್ತ ಆಹಾರ, ಮಸಾಲೆ ಆಹಾರ, ಧೂಮಪಾನ, ಆಲ್ಕೋಹಾಲ್‌ ಸೇವನೆ ಮಾಡಬೇಡಿ. ಮೂತ್ರವನ್ನು ಹಿಡಿದಿಡುವ ಪ್ರಯತ್ನ ಮಾಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read