ನವದೆಹಲಿ: ದೆಹಲಿಯ ಓಲ್ಡ್ ರಾಜಿಂದರ್ ನಗರದಲ್ಲಿ 25 ವರ್ಷದ ಯುಪಿಎಸ್‌ಸಿ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮ್ಮುವಿನ ಮೂಲದ ತರುಣ್ ಠಾಕೂರ್ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಈತ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ತರುಣ್ ಅವರ ಮೃತದೇಹ ಅವರ ಬಾಡಿಗೆ ವಸತಿಗೃಹದಲ್ಲಿ ಸೀಲಿಂಗ್ ಫ್ಯಾನ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಿಂದ ಕೈಬರಹದ ಟಿಪ್ಪಣಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಅವರು ಸ್ವತಃ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಮತ್ತು ಅವರ ನಿರ್ಧಾರಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಬರೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪದೇ ಪದೇ ಬಾಗಿಲು ತಟ್ಟಿದರೂ ತರುಣ್ ಪ್ರತಿಕ್ರಿಯಿಸದಿದ್ದಾಗ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ತರುಣ್ ಅವರ ಕುಟುಂಬಕ್ಕೂ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿಯು ಶೈಕ್ಷಣಿಕ ವಿಚಾರಕ್ಕೆ ಒತ್ತಡದಲ್ಲಿದ್ದನೆಂದು ಸೂಚಿಸುತ್ತದೆ. ಪೊಲೀಸತು ತನಿಖೆ ಕೈಗೊಂಡಿದ್ದಾರೆ.