ಮದುವೆ ಮೆರವಣಿಗೆಗೆ ಸಿದ್ಧನಾಗಿದ್ದ ವರ ಅರೆಸ್ಟ್; ಪೊಲೀಸ್ ಕಸ್ಟಡಿಯಲ್ಲೇ ಸಾವು

ಮಧ್ಯಪ್ರದೇಶದ ಗುಣಾ ಪೊಲೀಸರ ವಶದಲ್ಲಿ ವರ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ವರನ ಸಾವಿನ ನಂತರ ಕುಟುಂಬಸ್ಥರು ಪೊಲೀಸ್‌ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ವಧು ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡರೆ, ವರನ ಚಿಕ್ಕಮ್ಮ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬೆಂಕಿ ನಂದಿಸಲು ಮುಂದಾದ ಎಸ್‌ ಡಿ ಒ ಪಿ ಕೈ ಕೂಡ ಸುಟ್ಟಿದೆ ಎಂದು ವರದಿಯಾಗಿದೆ.

ಭಾನುವಾರ ಮದುವೆ ನಡೆಯಬೇಕಿತ್ತು. ಅದಕ್ಕೆ ಎಲ್ಲ ಸಿದ್ಧತೆ ನಡೆದಿತ್ತು. ಮದುವೆ ಮೆರವಣಿಗೆ ಹೊರಡುವ ಮೊದಲೇ ವರನ ಮನೆಗೆ ಬಂದ ಪೊಲೀಸರು ದರೋಡೆ ಆರೋಪದ ಮೇಲೆ ವರ ಮತ್ತು ಆತನ ಚಿಕ್ಕಪ್ಪನನ್ನು ಬಂಧಿಸಿದ್ದಾರೆ. 25 ವರ್ಷದ ವರ ದೇವ ಪಾರ್ದಿ ಮೇಲೆ ದರೋಡೆ, ಹಲ್ಲೆ, ಹತ್ಯೆ ಯತ್ನ ಸೇರಿದಂತೆ ಅನೇಕ ಪ್ರಕರಣವಿದೆ. ವಿಚಾರಣೆ ಕರೆತಂದಿದ್ದ ದೇವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ವಿಷ್ಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಠಾಣೆಗೆ ಧಾವಿಸಿದ್ದಾರೆ.

ದೇವ ಪೊಲೀಸ್‌ ಠಾಣೆಗೆ ಬರ್ತಿದ್ದಂತೆ ಅವನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹಾಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read